ಜ್ಯೋತಿಷ್ಯ

ಶಿವರಾತ್ರಿಯೆಂದು ಈ ರಾಶಿಗಳು ಇರುವವರು ಹೀಗೆ ರುದ್ರಾಭಿಷೇಕ ಮಾಡಿದ್ರೆ ಹೆಚ್ಚು ಫಲ..!ಹೇಗೆಂದು ತಿಳಿಯಲು ಈ ಲೇಖನ ಓದಿ…

By admin

February 12, 2018

ಮಹಾಶಿವರಾತ್ರಿ ದಿನದಂದು ಮಾಡುವ ರುದ್ರಾಭಿಷೇಕಕ್ಕೆ ಬಹಳ ಮಹತ್ವ ಇದೆ.ಅವರವರ ರಾಶಿಗಳಿಗೆ ತಕ್ಕಂತೆ ಮಾಡಿದ್ರೆ ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತೆ ಎಂದು ಹೇಳಲಾಗಿದೆ.

ಮಹಾಶಿವರಾತ್ರಿಯ ದಿನ, ನಿಮ್ಮ ತನು ಮನದಿಂದಿಂದ ಭಗವಾನ್ ಶಿವನಿಗೆ ಪೂರ್ಣ ಪೂಜೆ ಹಾಗೂ ಅರ್ಚನೆ  ಸಲ್ಲಿಸುವ ಮೂಲಕ ಅಖಂಡ ಭಕ್ತಿ ಮತ್ತು ಶಿವನ ಆಶೀರ್ವಾದ ಪ್ರಾಪ್ತಿಯಾಗುತ್ತೆ.ಶಿವನು ಕರುಣಾಸಾಗರನಾಗಿದ್ದು, ನಿರ್ಮಲ ಭಕ್ತಿಯಿಂದ ಪೂಜಿಸಿದರೆ ಅತೀ ಶೀಘ್ರ ಒಲಿಯುತ್ತಾನೆ.

“ರುದ್ರಾಭಿಷೇಕ” ಎಂದರೆ ಏನು..?

‘ಅಭಿಷೇಕ್’ ಎಂಬ ಪದವು ಅಕ್ಷರಶಃ ಸ್ನಾನ ಮಾಡುವುದು ಅಥವಾ ಮಾಡಿಸುವುದು ಎಂದರ್ಥ. ರುದ್ರಾಭಿಷೇಕ ಅಂದರೆ ಭಗವಾನ್ ರುದ್ರನ ಅಭಿಷೇಕ. ಭಗವಾನ್ ಶಿವನನ್ನು ರುದ್ರ ಎಂದು ಕರೆಯಲಾಗುತ್ತದೆ.ಮತ್ತು ಅವನ ನೋಟವನ್ನು ಶಿವಲಿಂಗದಲ್ಲಿ ಕಾಣಬಹುದು. ಹಾಗಾಗಿ ಶಿವಲಿಂಗದ ಮೇಲೆ ಮಂತ್ರಗಳ ಮೂಲಕ ಅಭಿಷೇಕ ಮಾಡುವುದೇ ರುದ್ರಾಭಿಷೇಕ. ಅಭಿಷೆಕದಲ್ಲಿ ಅನೇಕ ರೂಪಗಳಿವೆ.ಭಗವಾನ್ ಶಿವನನ್ನು ಪ್ರಸನ್ನ ಮಾಡಲು ಈ ರುದ್ರಾಭಿಷೇಕ ಸರ್ವ ಶ್ರೇಷ್ಟ.ಇದನ್ನು ಶ್ರೇಷ್ಠ ಬ್ರಾಹ್ಮಣ ಪಂಡಿತನು ಮಾಡಬೇಕು.

ಇಲ್ಲಿ ಓದಿ :-ಈ ಪಂಚಾಕ್ಷರಿ ಮಂತ್ರವನ್ನು ಒಮ್ಮೆ ಜಪಿಸಿದ್ರೆ ಏನಾಗುತ್ತೆ ಗೊತ್ತಾ..?

ಜೋತಿಷ್ಯದ ಪ್ರಕಾರ ಯಾವ ರಾಶಿಯವರು ಹೇಗೆ ‘ರುದ್ರಾಭಿಷೇಕ’ ಮಾಡಬೇಕು ಮುಂದೆ ನೋಡಿ…

ಮೇಷ ರಾಶಿ:-

ಈ ರಾಶಿಯವರು ಜೇನು ತುಪ್ಪ ಮತ್ತು ಕಬ್ಬಿನರಸದಿಂದ ಅಭಿಷೇಕ ಮಾಡಬೇಕು.

ವೃಷಭ ರಾಶಿ:-

ಹಾಲು ಮೊಸರು

ಮಿಥುನ ರಾಶಿ:-

ಶರಬತ್ತು ಅಥವಾ ಕಬ್ಬಿನ ಹಾಲು

ಕಟಕ ರಾಶಿ:-

ಹಾಲು,ಜೇನು ತುಪ್ಪ

ಸಿಂಹ ರಾಶಿ:-

ಜೇನು ತುಪ್ಪ, ಕಬ್ಬಿನ ಹಾಲು

ಕನ್ಯಾ ರಾಶಿ:-

ಮೊಸರು, ಕುಶೋದಕ

ತುಲಾ ರಾಶಿ:-

ಹಾಲು,ಕುಶೋದಕ

ವೃಚ್ಚಿಕ ರಾಶಿ:-

ಕಬ್ಬಿಣ ಹಾಲು,ಜೇನು ತುಪ್ಪ,ಹಾಲು

ಧನಸ್ಸು ರಾಶಿ:-

ಹಾಲು,ಜೇನುತುಪ್ಪ

ಮಕರ ರಾಶಿ:-

ಗಂಗಾ ಜಾಲದಲ್ಲಿ ಬೆಲ್ಲ ಹಾಕಿ ಮಾಡಿರುವ ರಸ, ಕುಶೋದಕ

ಕುಂಭ ರಾಶಿ:-

ಮೊಸರು,ಕುಶೋದಕ

ಮೀನ ರಾಶಿ:-

ಹಾಲು,ಜೇನುತುಪ್ಪ, ಕಬ್ಬಿಣ ಹಾಲು