ಸುದ್ದಿ

ಶಿಕ್ಷಣ ಸಚಿವರಿಂದ ರ್ಸರ್ಕಾರಿ ಶಾಲಾ ಶಿಕ್ಷಕರಿಗೊಂದು ಸಂತಸದ ಸುದ್ದಿ….!

By admin

September 03, 2019

ಸರ್ಕಾರಿ ಪ್ರಾಥಮಿಕ ಮತ್ತುಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ಶಿಕ್ಷಕರಕಡ್ಡಾಯ ವರ್ಗಾವಣೆಯನ್ನು ತಡೆ ಹಿಡಿದಿರುವುದಾಗಿ ಸುರೇಶ್ ಕುಮಾರ್ ಹೇಳಿದ್ದು, ಇದರ ಬಗ್ಗೆ ಅಂತಿಮತೀರ್ಮಾನವನ್ನು ನಾಳೆ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದಾಗಿ ಒಂದು ಸ್ಥಳದಲ್ಲಿ ಮತ್ತೊಂದು ಸ್ಥಳಕ್ಕೆಇಷ್ಟವಿಲ್ಲದಿದ್ದರೂ ಹೋಗಬೇಕಾಗಿತ್ತು. ಸದ್ಯಕ್ಕೆ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದ್ದು, ಪ್ರಸ್ತುತಶಿಕ್ಷಕರು ನಿರಾಳರಾಗಿದ್ದಾರೆ.

ಶಿಕ್ಷಕರು ಪರಸ್ಪರ ವರ್ಗಾವಣೆ ಸಹ ಮಾಡಿಕೊಳ್ಳಬಹುದಾಗಿತ್ತು, ಆದರೆ ಇದಕ್ಕೂಸದ್ಯ ತಡೆ ಬಿದ್ದಿದೆಯೋ ಅಥವಾ ಪರಸ್ಪರ ವರ್ಗಾವಣೆ ಚಾಲ್ತಿಯಲ್ಲಿದೆಯೋ ಮಾಹಿತಿಯನ್ನು ಶಿಕ್ಷಣ ಸಚಿವರುನಾಳೆ ನೀಡಲಿದ್ದಾರೆ.

ಮುಂದುವರೆದು ಮಾತನಾಡಿದ ಸುರೇಶ್ ಕುಮಾರ್, ‘ಹಿಂದಿನ ಸರ್ಕಾರದ ‘ಇಂಗ್ಲಿಷ್ ಮಾಧ್ಯಮಶಾಲೆ’ ವಿಚಾರ ಹಾಗೂ ಕಡ್ಡಾಯ ವರ್ಗಾವಣೆ ವಿಚಾರ ನಮ್ಮ ಮುಂದೆ ಇದೆ. ಪ್ರವಾಹ ಪೀಡಿತ ಕೊಡಗು ಜಿಲ್ಲೆಯಉಸ್ತುವಾರಿ ನನಗೆ ವಹಿಸಿರುವ ಕಾರಣ ನಿರ್ಧಾರ ತೆಗೆದುಕೊಳ್ಳುವುದು ಸ್ವಲ್ಪ ತಡವಾಗುತ್ತಿದೆ ಎಂದು ಸುರೇಶ್ಕುಮಾರ್ ಹೇಳಿದರು.