ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬರ್ತಿದೆ.ನಮ್ಮಲ್ಲಿ ವೋಟರ್ ಕಾರ್ಡ್ ಇದ್ರೂ ಕೂಡ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೋ,ಇಲ್ಲವೋ ಎಂಬ ಅನುಮಾನ ಕಾಡುವುದು ಸಹಜ.
ಆದ್ರೆ ನಿಮಗೆ ಅನುಮಾನ ಬೇಡ.ನಿಮ್ಮ ಹೆಸರು ಅಥವಾ ಬೇರೆ ಯಾರದೇ ಹೆಸರಾಗಲಿ ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೆಂಬುದನ್ನು ನಿಮ್ಮ ಮೊಬೈಲ್’ನಲ್ಲಿ ನೀವೇ ನೋಡಬಹುದು.
ಕೆಳಗೆ ಕೊಟ್ಟಿರುವ ಈ ಸರಳ ಕ್ರಮಗಳಿಂದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿ…
- ನಿಮ್ಮ ಮೊಬೈಲಿನ ಯಾವುದೇ ಬ್ರೌಸರ್’ನಿಂದ “http://ceokarnataka.kar.nic.in” ಈ ಲಿಂಕ್ ಕ್ಲಿಕ್ ಮಾಡಿ…ನಂತರ ಈ ಕೆಳಗೆ ತೋರಿಸಿರುವ ಚಿತ್ರದ ಪುಟ ತೆರದುಕೊಳ್ಳುತ್ತದೆ.
- ಚಿತ್ರದಲ್ಲಿ ತೋರಿಸಿರುವಂತೆ “search my name in Voter List” ಆಪ್ಷನ್ ಮೇಲೆ ಕ್ಲಿಕ್ ಮಾಡಿ…
- ನಿಮಗೆ ನಿಮ್ಮ voter id ಕಾರ್ಡ್’ನ ನಂಬರ್ ಗೊತ್ತಿದ್ರೆ, ಮೇಲಿನ ಚಿತ್ರದಲ್ಲಿ ತೋರಿಸಿರುವ ಆಪ್ಷನ್ ಕ್ಲಿಕ್ ಮಾಡಿ…
- ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಜಿಲ್ಲೆ ಮತ್ತು ಗುರುತಿನ ಚೀಟಿಯ ಸಂಖ್ಯೆಯನ್ನು ತುಂಬಿ…
- ನಂತರ ನಿಮ್ಮ ಸ್ಕ್ರೀನ್ ಮೇಲೆ captcha code ಬರುತ್ತದೆ. ಅದನ್ನು ತುಂಬಿ view details ಬಟನ್ ಒತ್ತಿ…
- ನೋಡಿ, ಮೇಲಿನ ಚಿತ್ರಗಳಲ್ಲಿ ತೋರಿಸಿರುವಂತೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ವಿಳಾಸ ಎಲ್ಲವನ್ನು ಚೆಕ್ ಮಾಡಿಕೊಳ್ಳಬಹುದು.
ಇಲ್ಲಿ ಓದಿ:- ನಿಮ್ಮ ಜಾತಿ/ಆಧಾಯ ಪ್ರಮಾಣ ಪತ್ರವನ್ನು ನಿಮ್ಮ ಮೊಬೈಲ್’ನಲ್ಲೇ ಅರ್ಜಿ ಸಲ್ಲಿಸಿ ಕೆಲವೇ ದಿನಗಳಲ್ಲಿ ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ…
ಮೇಲಿನ ಕ್ರಮಗಳಲ್ಲಿ ತೋರಿಸಿರುವಂತೆ ನೀವು ನಿಮ್ಮ ಗುರುತಿನ ಚೀಟಿ ನಂಬರ್’ನಿಂದ ಚೆಕ್ ಮಾಡಿದಂತೆ ನಿಮ್ಮ ಹೆಸರು ವಿಳಾಸವನ್ನು ಕೊಟ್ಟು ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಬಹುದು…ತಿಳಿಯಲು ಮುಂದೆ ಓದಿ…
- ಮೇಲಿನ ಚಿತ್ರದಲ್ಲಿರುವ ಆಪ್ಷನ್ ಕ್ಲಿಕ್ ಮಾಡಿ…
- ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಹೆಸರು ಮತ್ತು ವಿಳಾಸವನ್ನು ತುಂಬಿ…
- ನಂತರ ನಿಮ್ಮ ಸ್ಕ್ರೀನ್ ಮೇಲೆ captcha code ಬರುತ್ತದೆ. ಅದನ್ನು ತುಂಬಿ view details ಬಟನ್ ಒತ್ತಿ…
ಇಲ್ಲಿ ಓದಿ :-ನಿಮ್ಮ ವೋಟರ್ ಕಾರ್ಡ್’ನಲ್ಲಿ ಏನಾದ್ರೂ, ತಪ್ಪುಗಳಿದ್ದಲ್ಲಿ, ಕೇವಲ 2ನಿಮಿಷದಲ್ಲಿ ನಿಮ್ಮ ಮೊಬೈಲ್’ನಿಂದ್ಲೇ ಸರಿಪಡಿಸಿಕೊಳ್ಳಿ…
- ಈಗ ಮೇಲಿನ ಚಿತ್ರಗಳಲ್ಲಿರುವಂತೆ ನಿಮ್ಮ ಎಲ್ಲಾ ವಿವರಗಳನ್ನು ಕಾಣಬಹುದು.
ಹೆಚ್ಚಿನ ಉಪಯುಕ್ತ ಮಾಹಿತಿಗೆ ನಮ್ಮ “ಹಳ್ಳಿ ಹುಡುಗರು”ಪೇಜ್ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ…