ಘರಿಯಾಲ್ ಮೊಸಳೆಯ ಮರಿಗಳು.
ಗಂಡು ಮೊಸಳೆಯೊಂದಿಗೆ ಮಿಲನದ ನಂತರ ಹೆಣ್ಣು ಮೊಸಳೆ ನದಿಯ ತೀರದ ಹತ್ತಿರ ತನ್ನೆರೆಡು ಹಿಂಗಾಲಿನಿಂದ ಮಣ್ಣು/ ಮರಳು ಅಗೆದು ಅಂದಾಜು 1 ರಿಂದ 2 ಫೀಟಿನಷ್ಟು ಗೂಡು ಕಟ್ಟಿ ಮೊಟ್ಟೆ ಇಡುತ್ತದೆ.
ಮೊಟ್ಟೆಯಲ್ಲಿ ಬಲಿತ ಮರಿಗಳು ತೆವಳುತ್ತಾ ಭೂಮಿಯ ಮೇಲಡೆ ಬರುತ್ತವೆ.ತಾಯಿ ಮೊಸಳೆ ಇವನ್ನ ತನ್ನ ಬಾಯಲ್ಲಿ ಹಿಡಿದು ಅಥವಾ ಮೈಮೇಲೆ ಕೂರಿಸಿಕೊಂಡು ಸುರಕ್ಷಿತವಾಗಿ ನದಿಯೊಳಗೆ ಬಿಡುತ್ತದೆ.
ಹೀಗೆ ತನ್ನ ಮರಿಗಳನ್ನ ಬಿಡುವಾಗಲೂ ಅವು ತನ್ನದೇ ಮರಿಗಳ ದ್ವನಿಯಿಂದ ನಿಖರವಾಗಿ ಗ್ರಹಿಸುತ್ತವೆ. ಇನ್ನೊಂದು ಮೊಸಳೆಯ ಮರಿಗಳನ್ನ ಹೊತ್ತೊಯ್ಯುವುದಿಲ್ಲ .
ಇದು ಸಂಪೂರ್ಣ 80 ದಿನಗಳ ಪ್ರಕ್ರಿಯೇಯಾಗಿರುತ್ತೆ .ಆ ದಿನಗಳಲ್ಲಿ ಹೆಣ್ಣು ತಾಯಿ ಮೊಸಳೆ ತಾನು ಮೊಟ್ಟೆ ಇಟ್ಟಿರುವ ಪ್ರದೇಶದಿಂದ ದೂರವಿರದೇ ಸಮೀಪದಲ್ಲಿದ್ದು ಕಾವಲು ಕಾಯುತ್ತಿರುತ್ತದೆ.
ಇಲ್ಲಿ ಗೂಡಿನ ಉಷ್ಣತೆ ಗಂಡು/ ಹೆಣ್ಣು ಮೊಸಳೆಯಾಗಿ ಜನಿಸುವುದನ್ನ ನಿರ್ಧರಿಸುತ್ತೆ.34 ಡಿಗ್ರಿ ಗಿಂತಲೂ ಅಧಿಕವಾದ ಉಷ್ಣತೆ ಗಂಡು ಮೊಸಳೆ ಮರಿಗಳು ಜನಿಸುತ್ತವೆ .34 ಡಿಗ್ರಿ ಗಿಂತಲೂ ಕಡಿಮೆ ಉಷ್ಣತೆ ಹೆಣ್ಣು ಮೊಸಳೆ ಮರಿಗಳು ಜನಿಸುತ್ತವೆ.
ಕೃಪೆ : facebook ಪರಿಸರ ಪರಿವಾರ ಪೇಜ್