ಉಪಯುಕ್ತ ಮಾಹಿತಿ

ವಿಧ್ಯಾರ್ಥಿಗಳೇ ವೋಟ್ ಮಾಡಿ, ಉಚಿತ ಇಂಟರ್ನೆಟ್ ಜೊತೆಗೆ, ದಿನಸಿಯನ್ನು ಪಡೆಯಿರಿ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

By admin

April 20, 2018

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಚುನಾವಣಾ ಹತ್ತಿರವಾಗುತ್ತಿದ್ದಂತೆ ಮತದಾನದ ಬಗ್ಗೆ ಹರಿವು ಮೂಡಿಸುವ ಅನೇಕ ಪ್ರಯತ್ನಗಳು ನಡೆಯುತ್ತಿವೆ.ಈಗಾಗಲೇ ಚುನಾವಣಾ ಆಯೋಗ ಕೂಡ ಹಲವು ವಿಡಿಯೋಗಳು ಸೇರಿದಂತೆ ಪ್ಲೆಕ್ಸ್ ಬ್ಯಾನರ್’ಗಳನ್ನೂ ಹಾಕಿ ಜನರಲ್ಲಿ ಮತದಾನದ ಹರಿವು ಮೂಡಿಸುತ್ತಿದ್ದಾರೆ.

ಇದರ ಜೊತೆಗೆ ಹಲವು ಸಂಘಟನೆಗಳು ಕೂಡ ಜನರಲ್ಲಿ ಅದರಲ್ಲೂ ಯುವಕರಲ್ಲಿ, ವಿಧ್ಯಾರ್ಥಿಗಳಲ್ಲಿ ಮತದಾನದ ಹರಿವು ಮೂಡಿಸುವ ಸಲುವಾಗಿ ವಿಧ್ಯಾರ್ಥಿಗಳಿಗಾಗಿ ಹಲವು ಆಫರ್’ಗಳನ್ನೂ ನೀಡಲು ಮುಂದಾಗಿವೆ.

ಹೌದು, ಬೆಂಗಳೂರಿನ ಸಂಘಟನೆಯೊಂದು ವೋಟ್ ಹಾಕುವ ವಿದ್ಯಾರ್ಥಿಗಳಿಗೆಲ್ಲಾ ಉಚಿತವಾಗಿ ಇಂಟರ್ ನೆಟ್ ಸೇವೆ ಹಾಗೂ ರಿಯಾಯಿತಿ ದರದಲ್ಲಿ ದಿನಸಿ ಸಾಮಗ್ರಿಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ.

ಯುವಕರಲ್ಲಿ ಹಾಗೂ ವಿಧ್ಯಾರ್ಥಿಗಳಲ್ಲಿ ಮತದಾನದ ಜಾಗೃತಿಯನ್ನು  ಮೂಡಿಸುವ ಉದ್ದೇಶ ಹಾಗೂ ಮತದಾನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ, ಬೆಂಗಳೂರಿನ ರಾಜಾಜಿನಗರದ ಜನಪ್ರಿಯ ಪಬ್ಲಿಕ್ ವಾಯ್ಸ್ ಜಡ್ಜ್ ಮೆಂಟ್ ಸಂಘಟನೆ ಈ ಕಾರ್ಯಕ್ರಮ ಅಮ್ಮಿಕೊಂಡಿದ್ದು, ಹಲವು ಆಫರ್’ಗಳನ್ನೂ ನೀಡಲು ಮುಂದಾಗಿದೆ.

ವೋಟ್ ಮಾಡುವ ವಿಧ್ಯಾರ್ಥಿಗಳಿಗೆ:-

ಮತದಾನದ ದಿನದಂದು ವಿಧ್ಯಾರ್ಥಿಗಳು ಬೆರಳಿನ ಗುರುತಿಗೆ ಹಾಕುವ ಶಾಯಿ ತೋರಿಸಿ 25 ಪೈಸೆ ದರದಲ್ಲಿ ಜೆರಾಕ್ಸ್ ಮಾಡಿಸಿಕೊಳ್ಳಬಹುದು.

ಇದರ ಜೊತೆಗೆ ನವರಂಗ್ ಚಿತ್ರಮಂದಿರದ ಬಳಿ ಇರುವ ಜನಪ್ರಿಯ ಬ್ರೌಸಿಂಗ್ ಸೆಂಟರ್’ನಲ್ಲಿ 1 ಗಂಟೆ ಉಚಿತವಾಗಿ ಇಂಟರ್ ನೆಟ್ ಸೇವೆ ಪಡೆಯಬಹುದಾಗಿದೆ. ಇದರ ಜೊತೆಗೆ ನವರಂಗ್ ಚಿತ್ರಮಂದಿರದ ಬಳಿ ಇರುವ ದಿನಸಿ ಅಂಗಡಿಯಲ್ಲಿ ರಿಯಾಯತಿ ದರದಲ್ಲಿ ದಿನಸಿಯನ್ನು ಪಡೆಯಬಹುದು.

ಮತದಾನ ಮಾಡುವ ಜನರು ಕೂಡ ಶೇ. 40 ರಷ್ಟರವರೆಗೆ ರಿಯಾಯಿತಿ ದರದಲ್ಲಿ ದಿನಸಿಯನ್ನು ಪಡೆಯಬಹುದು ಎಂದು ಸಂಘಟನೆ ತಿಳಿಸಿದೆ. ವಿಧ್ಯಾರ್ಥಿಗಳು ವೋಟ್ ಮಾಡಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ…