ಸುದ್ದಿ

ವಿದ್ಯಾರ್ಥಿಗಳೇ ಎಚ್ಚರ, ಕಾಲೇಜ್​ಗೆ ಮೊಬೈಲ್​ ತೆಗೆದುಕೊಂಡು ಹೋದರೆನಿಮ್ಮ ಪೋನ್ ಆಗಬಹುದು ಪೀಸ್ ಪೀಸ್​​…!!ಯಾಕೆ ಗೊತ್ತ?

By admin

September 13, 2019

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚೈತನ್ಯ ಪಿಯು ಕಾಲೇಜಿನಲ್ಲಿ ಮೊಬೈಲ್​ ಬ್ಯಾನ್ ಮಾಡಿ ಕಾಲೇಜು ಆಡಳಿತ ಆದೇಶ ಹೊರಡಿಸಿತ್ತು.

ಆ ಕಾಲೇಜು ಆವರಣದಲ್ಲಿ, ಕ್ಲಾಸ್​ನಲ್ಲಿ ಮೊಬೈಲ್​ ಬ್ಯಾನ್​ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ವಿದ್ಯಾರ್ಥಿಗಳು ಮಾತ್ರ ಉಪನ್ಯಾಸಕರ ಕಣ್ಣುತಪ್ಪಿಸಿ ಮೊಬೈಲ್​ ಬಳಸುತ್ತಿದ್ದರು. ಇದು ಪ್ರಿನ್ಸಿಪಾಲ್​ ಗಮನಕ್ಕೆ ಬಂದಿದ್ದೆ ತಡ ವಿದ್ಯಾರ್ಥಿಗಳ ಮೊಬೈಲ್​​ ಪುಡಿ ಪುಡಿಯಾಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ.

ಆದರೂ ಪಿಯು ವಿದ್ಯಾರ್ಥಿಗಳು ಕದ್ದುಮುಚ್ಚಿ ಮೊಬೈಲ್​ ಬಳಸುತ್ತಿದ್ದರು. ಇದನ್ನು ಗಮನಿಸಿದ ಪ್ರಿನ್ಸಿಪಾಲ್ ದಾಳಿ ನಡೆಸಿ ಒಟ್ಟು 16 ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ದರು.

ಹೀಗೆ ವಶಕ್ಕೆ ಪಡೆದ ಮೊಬೈಲ್​ಗಳನ್ನು ಪ್ರಿನ್ಸಿಪಾಲ್​ ಆರ್.ಎಂ.ಭಟ್​, ಈ ಮೊಬೈಲ್​ಗಳನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲೇ ಸುತ್ತಿಗೆಯಿಂದ ಒಡೆದು ಹಾಕಿದ್ದು, ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ. ಆದರೆ ಮೊಬೈಲ್ ಕಳೆದುಕೊಂಡ ವಿದ್ಯಾರ್ಥಿಗಳು ಮಾತ್ರ ಪ್ರಿನ್ಸಿಪಾಲ್​ಗೆ ಹಿಡಿಶಾಪ ಹಾಕುತ್ತಿದ್ದಾರೆ.