ಸ್ಪೂರ್ತಿ

ವಿದ್ಯಾರ್ಥಿಗಳು ಸೊಳ್ಳೆಗಳ ನಿಯಂತ್ರಣಕ್ಕೆ ಸ್ವೀಟ್ ಕೇಕ್ ಕಂಡು ಹಿಡಿದಿದ್ದಾರೆ..!ತಿಳಿಯಲು ಈ ಲೇಖನ ಓದಿ…

By admin

January 19, 2018

ಪ್ರಸ್ತುತ ದಿನಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚುತ್ತಿದ್ದು ಅದರಿಂದ ಡೆಂಗ್ಯೂ ಜ್ವರ ಮುಂತಾದ ಹಲವಾರು ಕಾಯಿಲೆಗಳು ಹೆಚ್ಚಾಗುತ್ತಿವೆ. ಇವುಗಳಿಂದ ಮನುಷ್ಯ ರಕ್ಷಣೆ ಪಡೆಯಲು ಮಾರುಕಟ್ಟೆಯಲ್ಲಿನ ವಿವಿಧ ರೀತಿಯ ಸೊಳ್ಳೆಯನ್ನು ನಿಯಂತ್ರಿಸುವ ಸಲಕರಣೆಗಳನ್ನು ಪಡೆಯಲು ಮುಂದಾಗುತ್ತಿರುವುದು ಪ್ರಸ್ತುತ ನಡೆಯುತ್ತಿದೆ.

ಮಾರುಕಟ್ಟೆಯಲ್ಲಿ ಹೆಚ್ಚಿನದಾಗಿ ಸೊಳ್ಳೆಗಳ ನಿಯಂತ್ರಣಕ್ಕೆ ಸಿಗುವಂತವು ಸೊಳ್ಳೆ ಬ್ಯಾಟ್, ಗುಡ್ ನೈಟ್, ಮುಂತಾದವುಗಳು. ಆದರೆ ಇಲ್ಲೊಂದು ವಿಶೇಷವಾದ ಪರಿಹಾರವನ್ನು ಹುಡುಕಿದ್ದಾರೆ ಈ ವಿದ್ಯಾರ್ಥಿಗಳು.

ಉಡುಪಿ ಜಿಲ್ಲೆಯ ಮಣಿಪಾಲ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಕಾಲೇಜೊಂದರ ವಿದ್ಯಾರ್ಥಿಗಳು ಈ ಒಂದು ಹೊಸ ವಿಧಾನವನ್ನು ಕಂಡು ಹಿಡಿದಿದ್ದಾರೆ. ಸೊಳ್ಳೆಗಳನ್ನು ನಿಯಂತ್ರಿಸುವುದಕ್ಕೆ ಸ್ವೀಟ್ ಕೇಕ್ ಕಂಡು ಹಿಡಿದಿದ್ದಾರೆ.

ಸೊಳ್ಳೆಗಳನ್ನು ನಿಯಂತ್ರಿಸುವುದಕ್ಕೆ ಸ್ವೀಟ್ ಕೇಕ್   ತಯಾರಿಸಿದ್ದು   ಹೇಗೆ   ಗೋತ್ತಾ ..?

ಕೋಳಿ ಪುಕ್ಕಗಳಿಂದ ತಯಾರಿಸಿದ್ದಾರೆ. ವೈಜ್ಞಾನಿಕ ಪದ್ಧತಿಗಳ ಮೂಲಕ ಪುಕ್ಕಗಳನ್ನು ರಾಸಾಯನಿಕಗಳೊಂದಿಗೆ ಬೆರೆಸಿ ಅದನ್ನು ಕೇಕ್ ಆಗಿ ತಯಾರಿಸಿದ್ದಾರೆ. ಅಷ್ಟೇ ಅಲ್ಲದೆ ಈ ಕೇಕ್ ನಿಂದ ಸೊಳ್ಳೆಗಳ ಲಾರ್ವಾ ಬೆಳೆಯದಂತೆ ನಿಯಂತ್ರಿಸುತ್ತದಂತೆ. ಹಾಗು ನೊಣಗಳು ಸುಳಿಯದಂತೆ ಕೆಲಸ ಮಾಡುತ್ತದೆ.

ಇದನ್ನು ಬಳಸುವುದು ಹೇಗೆ ಗೊತ್ತಾ..?

ಸೊಳ್ಳೆಗಳು ಹಾಗು ನೊಣಗಳು ಹೆಚ್ಚಾಗಿ ಇರುವಂತ ಸ್ಥಳದಲ್ಲಿ ಈ ಕೇಕ್ ಅನ್ನು ಇಡಬೇಕು. ಇದರಿಂದ ಬೇರೆ ರೀತಿಯ ಕೀಟಗಳಿಗೆ ಹನಿ ಹಾಗುವುದಿಲ್ಲ. ನಿಜಕ್ಕೂ ಇಂತಹ ಒಂದು ಹೊಸ ವಿಧಾನವನ್ನು ಕಂಡು ಹಿಡಿದ ಆ ವಿದ್ಯಾರ್ಥಿಗಳಿಗೆ ನಮ್ಮ ಕಡೆಯಿಂದ ಶುಭಾಶಯ ತಿಳಿಸುತ್ತೇವೆ.