ವಿಚಿತ್ರ ಆದರೂ ಸತ್ಯ

ವಿಜ್ಞಾನಿಗಳಿಂದ ಕಡೆಗೊ ಬಯಲಾಯ್ತು ಉತ್ತರ; ಕೋಳಿ ಮೊದಲೋ..? ಮೊಟ್ಟೆ ಮೊದಲೋ..? ತಿಳಿಯಲು ಈ ಲೇಖನ ಓದಿ …

By admin

December 12, 2017

ಈ ಜಗತ್ತಿನಲ್ಲಿ ಉತ್ತರ ಸಿಗದಂತಹ ಪ್ರಶ್ನೆಗಳು ಹಲವಾರಿವೆ ಅವುಗಳಲ್ಲೊಂದು ಕೋಳಿ ಮೊಟ್ಟ ಮೊದಲು ಬಂದಿದ್ದು? ಅಥವಾ ಮೊಟ್ಟೆ ಮೊಟ್ಟ ಮೊದಲು ಬಂದಿದ್ದು ? ಕೊನೆಗೂ ಇದಕ್ಕೆ ವಿಜ್ಞಾನಿಗಳಿಂದ ಉತ್ತರ ಲಭ್ಯವಾಗಿದೆ.

ಬ್ರಿಟನ್‌ನ ವಿಜ್ಞಾನಿಗಳು ಜಗತ್ತಿಗೆ ಮೊದಲು ಕೋಳಿ ಬಂತು ಎನ್ನುತ್ತಾರೆ. ಅದಕ್ಕೆ ಅವರಿಗೆ ಪುರಾವೆ ಸಿಕ್ಕಿದೆಯಂತೆ. ಇಂಗ್ಲೆಂಡ್ ಶೆಫೀಲ್ಡ್ ಮತ್ತು ವಾರ್ವಿಕ್ ಯುನಿವರ್ಸಿಟಿಯ ಸಂಶೋಧಕರು ಅಧ್ಯಯನದ ಮೂಲಕ ಈ ತತ್ವವವನ್ನು ಕಂಡು ಹಿಡಿದಿದ್ದಾರೆ ಅಂತೆ.

ಅಂದರೆ ಮೊಟ್ಟೆಯ ಸಿಪ್ಪೆಯಲ್ಲಿ ಒಂದು ಖಾಸಾ ಪ್ರೊಟೀನಿದೆ. ಅದು ಕೋಳಿಯ ಅಂಡಾಶಯದಿಂದ ಹೊರಬರುತ್ತದೆ. ಅದ್ದರಿಂದ ಮೊದಲು ಕೋಳಿಯೇ ಬಂತು ಎನ್ನುತ್ತಾರೆ ವಿಜ್ಞಾನಿಗಳು. ಹೀಗೆ ಕೋಳಿ ಮೊಟ್ಟೆ ಇಟ್ಟಿದೆ.

ವಿಜ್ಞಾನಿಗಳಿಗೆ ಮೊದಲೇ ಗೊತ್ತಿತ್ತು. ವೊಕ್ಲೆಡಿಡಿನ್-17(ಒಸಿ-17) ಹೆಸರಿನ ಪ್ರೊಟೀನ್ ಮೊಟ್ಟೆ ರೂಪುಗೊಳ್ಳುವುದಕ್ಕೆ ಮುಖ್ಯ ಪಾತ್ರ ವಹಿಸುತ್ತದೆ. ಕ್ಯಾಲ್ಸಿಯಂ ಕಾರ್ಬೊನೆಟ್ ಜೊತೆ ಒಸಿ-17 ಸೇರಿಕೊಳ್ಳುತ್ತದೆ. ಹಾಗಾದರೆ ಕೋಳಿ ಹೇಗೆ ಹುಟ್ಟಿತು ಎನ್ನುವ ಪ್ರಶ್ನೆ ಸೃಷ್ಟಿಯಾಯಿತು. ವಿಜ್ಞಾನಿಗಳು ಮೊಟ್ಟೆ ಇಡುವ ಕೆಲವು ಜಾತಿಯ ಪಕ್ಷಿಗಳು ಕೋಳಿಗೆ ಜನ್ಮನೀಡಿತು ಎನ್ನುತ್ತಾರೆ.

ಈ ಸಂಶೋಧನೆಯಲ್ಲಿ ದೊಡ್ಡ ಯಶಸ್ಸು ಶೆಫೀಲ್ಡ್ ಯುನಿವರ್ಸಿಟಿ ಪ್ರೋಫೆಸರ್ ಜಾನ್ ಹಾರ್ಡಿಂಗ್ ಸಿಕ್ಕಿದೆ. ಅವರು ಹೇಳುತ್ತಾರೆ “ಹೇಗೆ ಮೊಟ್ಟೆ ಆಗುತ್ತದೆ ಎಂದು ತಿಳಿದುಕೊಳ್ಳಬೇಕಿತ್ತು.ನಿಜಕ್ಕೂ ಅದೊಂದು ಅಪೂರ್ವ ಅನುಭವಾಗಿದೆ. ಇದರಿಂದ ಇನ್ನೊಂದು ರಹಸ್ಯ ಬಹಿರಂಗವಾಯಿತು.

ಅದರಿಂದ ಹೊಸಡಿಸೈನ್‌ನ ವಸ್ತು ತಯಾರಿಸಲು ಉಪಯುಕ್ತವಾಗಲಿದೆ. ಪ್ರಾಕೃತಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದರೆ ಎಲ್ಲರೀತಿಯ ಸಮಸ್ಯೆ ಕೊನೆಗೊಳ್ಳುತ್ತದೆ. ಅದರಿಂದ ನಾವು ಬಹಳಷ್ಟು ಕಲಿಯಬಹುದಾಗಿದೆ.”