ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತೀರಾ..? ಹಾಗಿದ್ರೆ ಹುಷಾರ್ 10 ಸಾವಿರ ಫೈನ್ ಕಟ್ಟಲೇಬೇಕು. ಇದು ಕೇಂದ್ರ ಸರ್ಕಾರದ ಹೊಸ ನಿಯಮ. ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಕೂಡ ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಿದೆ.
ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಹೊಸ ಮೋಟಾರು ವಾಹನ ಕಾಯ್ದೆ ಮಸೂದೆ ಮಂಡಿಸಿದೆ. ಹೊಸ ಮಸೂದೆ ಪ್ರಕಾರ ಮದ್ಯಪಾನ ಮಾಡಿದ್ರೆ 10 ಸಾವಿರ ದಂಡ,
ಅದೇ ರೀತಿ ರ್ಯಾಶ್ ಡ್ರೈವ್ ಮಾಡಿದ್ರೆ 5 ಸಾವಿರ ದಂಡ, ಲೈಸೆನ್ಸ್ ಇಲ್ಲ ಅಂದ್ರೆ 5 ಸಾವಿರ ದಂಡ, ಫೋನ್ನಲ್ಲಿ ಮಾತನಾಡುತ್ತಾ ಚಾಲನೆ ಮಾಡಿದ್ರೂ 5 ಸಾವಿರ ದಂಡ ವಿಧಿಸಲು ಮುಂದಾಗಿದೆ.
ಕಳೆದ ವರ್ಷ ಮಂಡಿಸಿದ್ದ ಈ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ. ಹೀಗಾಗಿ ಪರಿಷ್ಕೃತ ಮಸೂದೆಯನ್ನ ಮತ್ತೆ ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರವಾಗಿದೆ. ರಾಜ್ಯಸಭೆಯಲ್ಲೂ ಇದು ಅಂಗೀಕಾರವಾದ್ರೆ ಶೀಘ್ರವೇ ಈ ಕಾಯ್ದೆ ಜಾರಿಗೆ ಬರಲಿದೆ. ವಾಹನ ಸವಾರರಿಗೆ ದುಪ್ಪಟು ಫೈನ್ ಬೀಳಲಿದೆ.