ಗ್ಯಾಜೆಟ್

ವಾಟ್ಸಾಪ್ ಮೂಲಕ ಅವಿವಾಹಿತರು ತಮ್ಮ ಬಾಳಸಂಗಾತಿ ಆಯ್ಕೆ ಮಾಡಿಕೊಳ್ಳಬಹುದು ..!ತಿಳಿಯಲು ಈ ಲೇಖನ ಓದಿ..

By admin

January 12, 2018

ನೀವು ಅವಿವಾಹಿತರೇ, ಮದುವೆಯಾಗಬೇಕು ಎಂದಿದ್ದೀರಾ? ಹಾಗಿದ್ದರೆ ನಿಮಗೆ ಸೂಕ್ತ ಎನ್ನಿಸುವ ಜೀವನ ಸಂಗಾತಿಯನ್ನು ಇನ್ನು ಮುಂದೆ ವಾಟ್ಸಾಪ್  ಮೂಲಕ ಆಯ್ಕೆ ಮಾಡಿಕೊಳ್ಳಬಹುದು ಎನ್ನುತ್ತಿದೆ ಮುಂಬಯಿ ನಗರದ ಅಂಧಶ್ರದ್ಧ ನಿರ್ಮೂಲನಾ ಸಮಿತಿ.

ಜಾತಿ, ಧರ್ಮ ಸಂಪ್ರದಾಯಕ್ಕೆ ಅನುಗುಣವಾಗಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವವರು ತಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ ಸೇರಬಹದು ಎಂದು ಸಮತಿ ಪ್ರಕಟಿಸಿದೆ. ಹಣ ಸಲ್ಲಿಸಿ ವಿವಾಹ ವೆಬ್ ಸೈಟ್ ಗಳಲ್ಲಿ ಹೆಸರು ನಮೂದಿಸಿಕೊಂಡು ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹೊಸ ಪದ್ದತಿಯನ್ನು ಸಮಿತಿ ಕಂಡು ಹಿಡಿದಿದೆ.

ಹಣ ಸಲ್ಲಿಸಿ ವಿವಾಹ ವೆಬ್‌ಸೈಟ್‌ಗಳಲ್ಲಿ ಹೆಸರು ನಮೂದಿಸಿಕೊಂಡು ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಯುವತಿ, ಯುವಕರು ಸಂಪ್ರದಾಯಕ್ಕೆ ಗುಡ್ ಬೈ ಹೇಳಿ ಆಧುನಿಕ ಪದ್ಧತಿಯಲ್ಲಿ ವಾಟ್ಸಾಪ್ ಗ್ರೂಪ್ ಮೂಲಕ ನಿಮಗೆ ಇಷ್ಟವಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ ಎಂದಿದೆ ಸಮಿತಿ.

ನಿಮಗೆ ಬಾಳ ಸಂಗಾತಿ ಹೇಗಿರಬೇಕು ನೀವೇ ಆಯ್ಕೆ ಮಾಡಿಕೊಳ್ಳಬಹುದು. ಈ ವಿವಾಹ ಗ್ರೂಪ್ ಅಡ್ಮಿನ್ 45 ದಿನಗಳ ಕಾಲ ಪ್ರತಿನಿತ್ಯ ಸದಸ್ಯರಿಗೆ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಪ್ರತಿಯೊಬ್ಬರು ಕಡ್ಡಾಯವಾಗಿ ಉತ್ತರಿಸಬೇಕು. 50 ದಿನಗಳ ಕಾಲ ಮಾತ್ರ ಈ ಗ್ರೂಪ್ ಚಾಲ್ತಿಯಲ್ಲಿರುತ್ತದೆ.

18 ವರ್ಷಕ್ಕಿಂತಲೂ ಮೇಲ್ಪಟ್ಟವರು ಜಾತಿ, ಧರ್ಮ, ಭಾಷೆ, ಪ್ರದೇಶಕ್ಕೆ ಅತೀತವಾಗಿ ಈ ವಿವಾಹ ವಾಟ್ಸಾಪ್ ಗ್ರೂಪ್‌ನಲ್ಲಿ ಸೇರಬಹುದು ಎಂದಿದೆ ಸಮಿತಿ. ಕಳೆದ ಕೆಲ ವರ್ಷಗಳಿಂದ ಈ ಸಮಿತಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮಕ್ಕೂ ಅಡಿಯಿಟ್ಟಿದ್ದು ವಾಟ್ಸಾಪ್ ಗ್ರೂಪ್ ಸೃಷ್ಟಿಸಿದೆ.