ಗ್ಯಾಜೆಟ್

“ವಾಟ್ಸಪ್” ಬಳಕೆದಾರರಿಗೆ ಸಿಹಿ ಸುದ್ದಿ !!!

By admin

June 08, 2017

“ವಾಟ್ಸಪ್” (ಸಾಮಾಜಿಕ ಜಾಲತಾಣ)ವನ್ನು ಉಪಯೋಗಿಸದವರು ಯಾರಿದ್ದಾರೆ. ಈಗಂತೂ ಎಲ್ಲಾ ವಯೋಮಾನದವರು ವಾಟ್ಸಪ್ ನಲ್ಲೇ ಕಾಲ ಕಳೆಯುವುದು ಹೆಚ್ಚು.

ಇದಕ್ಕೆ ಉದಾಹರಣೆಯಂತೆ,  ವಿಶ್ವದ 120 ಕೋಟಿ ಸಕ್ರಿಯ ಬಳಕೆದಾರರ ಪೈಕಿ 2 ಕೋಟಿ ಸಕ್ರಿಯ ಬಳಕೆದಾರರು ಭಾರತದಲ್ಲಿದ್ದಾರೆ.

ಕನ್ನಡ ಸೇರಿದಂತೆ ಭಾರತದ 10 ಭಾಷೆ ವಿಶ್ವದ ಒಟ್ಟು 50 ಭಾಷೆಗಳಲ್ಲಿ ವಾಟ್ಸಪ್ ಜಾಲತಾಣ ಲಭ್ಯವಿದೆ.

ನಾವು ವಾಟ್ಸಪ್ ಬಳಕೆ ಸಂಧರ್ಭದಲ್ಲಿ ಕೆಲವೊಂದು ತಪ್ಪುಗಳು ಆಗುವುದು ಸಹಜ. ಅಂದರೆ ವಾಟ್ಸಪ್ ನಲ್ಲಿ ನಿಮ್ಮ ಆಪ್ತರಿಗೆ ಸೆಂಡ್ ಮಾಡಬೇಕಿದ್ದ ಮೆಸೇಜ್, ಫೋಟೋ, ವಿಡಿಯೋ, ಜಿಫ್ ಫೈಲ್, ಡಾಕ್ಯುಮೆಂಟ್ಗಳನ್ನು  ತಪ್ಪಾಗಿ ಬೇರೆಯವರಿಗೆ ಸೆಂಡ್ ಮಾಡುವುದು.

ಇನ್ನು ಮುಂದೆ ವಾಟ್ಸಪ್ ನಲ್ಲಿ ನಿಮ್ಮ ಆಪ್ತರಿಗೆ ಸೆಂಡ್ ಮಾಡಬೇಕಿದ್ದ ಮೆಸೇಜ್ ತಪ್ಪಾಗಿ ಬೇರೆಯವರಿಗೆ ಸೆಂಡ್ ಮಾಡಿದ್ರೆ ಚಿಂತೆ ಮಾಡಬೇಕಿಲ್ಲ. ಆ ಮೆಸೇಜನ್ನು ‘ರಿಕಾಲ್’ ಮಾಡಬಹುದು.

ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಈಗ ರಿಕಾಲ್ ವಿಶೇಷತೆಯನ್ನು ಸೇರಿಸಲು ಮುಂದಾಗುತ್ತಿದೆ ಎಂದು ವಾಟ್ಸಪ್ ಬೀಟಾಇನ್ಫೋ ತಾಣ ವರದಿ ಮಾಡಿದೆ.

ಈ ರಿಕಾಲ್ ವಿಶೇಷತೆಯಲ್ಲಿ ಬಳಕೆದಾರರು ಮೆಸೇಜ್, ಫೋಟೋ, ವಿಡಿಯೋ, ಜಿಫ್ ಫೈಲ್, ಡಾಕ್ಯುಮೆಂಟ್ ಗಳನ್ನು ರಿಕಾಲ್ ಮಾಡಬಹುದು. ಮುಂದಿನ ವಾಟ್ಸಪ್ ಅಪ್‍ಡೇಟ್ ನಲ್ಲಿ ಈ ವಿಶೇಷತೆ ಬಳಕೆದಾರರಿಗೆ ಲಭ್ಯವಾಗಲಿದೆ.