ಎರಡು ಕುಟುಂಬಗಳನ್ನು ಒಂದು ಮಾಡುವ ಸಮಾರಂಭವೇ ಮದುವೆ…ಇಲ್ಲಿಯವರೆಗೂ ಇದ್ದ ಒಂಟಿ ಪ್ರಯಾಣ ಇನ್ನು ಮುಂದೆ ಜೋಡಿಯಾಗಿ ಸಾಗುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಮದುವೆಗೊಂದು ವಿಶಿಷ್ಟತೆಯಿದೆ. ಐದು ದಿನಗಳ ಕಾಲ ನಯನ ಮನೋಹರವಾಗಿ ಸಾಗುವ ಮದುವೆಯಲ್ಲಿ ಬಂಧು ಮಿತ್ರರು,ಬಾಜಾ ಭಜಂತ್ರಿಗಳು..ಎಲ್ಲವೂ ಓಕೆ. ಆದರೆ,ಮದುವೆಗೆ ಸಂಬಂಧಿಸಿದಂತೆ ಈ ಪ್ರಶ್ನೆ ಹಾಗೇ ಉಳಿದುಹೋಗಿದೆ.
ವರ ವಧುವಿನ ಕೊರಳಿಗೆ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಮಾತ್ರ ಹಾಕುತ್ತಾನೆ .ಏಕೆ ?
ಹಿಂದೂ ಸಂಪ್ರದಾಯದಲ್ಲಿ ಮೂರು ಎಂಬ ಅಂಕೆಗೆ ಒಂದು ವಿಶೇಷ ಪ್ರಾಧಾನ್ಯತೆಯಿದೆ. ತ್ರಿಲೋಕಗಳು, ತ್ರಿಮೂರ್ತಿಗಳು, ತ್ರಿಗುಣಗಳು…ಹೀಗೆ ಮೂರು ಎನ್ನುವುದನ್ನು ಮಂಗಳಕರವೆಂದು ಭಾವಿಸುತ್ತಾರೆ. ಆದುದರಿಂದ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕುತ್ತಾರೆ.
ಇನ್ನೂ ವಿವರವಾಗಿ ಹೇಳಬೇಕೆಂದರೆ…ಮಾನವರಿಗೆ ಸ್ಥೂಲ,ಸೂಕ್ಷ್ಮ,ಕಾರಣ ಎಂಬ ಮೂರು ಶರೀರಗಳು ಇರುತ್ತವಂತೆ. ಮದುವೆ ಸಮಯದಲ್ಲಿ ಹಾಕುವ ಒಂದೊಂದು ಗಂಟು ಒಂದೊಂದು ಶರೀರಕ್ಕೆ ಹಾಕುವುದಂತೆ…! ಮದುವೆಯೆಂದರೆ ಕೇವಲ ಬಾಹ್ಯ ಶರೀರಕ್ಕಲ್ಲದೆ…ಒಟ್ಟು ಮೂರು ಶರೀರಗಳಿಂದ ನಾವು ಒಂದಾಗುತ್ತಿದ್ದೇವೆ ಎಂಬುವುದೇ ಮೂರು ಗಂಟುಗಳನ್ನು ಹಾಕುವುದರ ಅರ್ಥವಂತೆ.