ಮಧ್ಯಪ್ರದೇಶದ ನಿಮಚ್ ನಲ್ಲಿ ಅನನ್ಯ ಹಾಗೂ ಸಮಾಜಕ್ಕೆ ಮಾದರಿಯಾಗಬಲ್ಲಂತ ಮದುವೆಯೊಂದು ನಡೆದಿದೆ. ಮದುವೆಗಾಗಿ ಅಹಮದಾಬಾದ್ ನಿಂದ ಬಂದಿದ್ದ ವರ ಸಪ್ತಪದಿ ನಂತ್ರ 8ನೇ ಸುತ್ತು ಸುತ್ತಲು ಶುರುಮಾಡಿದ್ದಾನೆ. ಇದನ್ನು ನೋಡಿ ನೆರೆದಿದ್ದವರೆಲ್ಲ ಆಶ್ಚರ್ಯಕ್ಕೊಳಗಾಗಿದ್ದಾರೆ. ಆದ್ರೆ ಇದಕ್ಕೆ ವರ ಹೇಳಿದ ಕಾರಣ ಕೇಳಿ ಜನರೆಲ್ಲರೂ ಶಹಬ್ಬಾಸ್ ಎಂದಿದ್ದಾರೆ.
ಹೀನಾ ಕೈ ಹಿಡಿದ ವರ ಕುಲದೀಪ್ ಈ ಬಗ್ಗೆ ಮೊದಲೇ ಪಂಡಿತರು ಹಾಗೂ ವಧುವಿಗೆ ಹೇಳಿದ್ದ. ನಾನು ವರದಕ್ಷಿಣೆ ವಿರೋಧಿಯಾಗಿದ್ದೇನೆ. ಈ ಅನಿಷ್ಠ ಪದ್ಧತಿ ವಿರುದ್ಧ ಹೋರಾಡಲು ಬಯಸಿದ್ದೇನೆ.
ಸಪ್ತಪದಿ ನಂತ್ರ 8ನೇ ಸುತ್ತು ತಿರುಗಲು ಕಾರಣ ವರದಕ್ಷಿಣೆ ಎಂದು ವರ ಹೇಳಿದ್ದಾನೆ. ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲ ಹಾಗೂ ವರದಕ್ಷಿಣೆ ನೀಡುವುದಿಲ್ಲವೆಂದು ಈ ಮೂಲಕ ಶಪತ ಮಾಡಿದ್ದೇನೆಂದು ವರ ಹೇಳಿದ ಮಾತು ಕೇಳಿ ಮದುವೆಗೆ ಬಂದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ಕಾರಣಕ್ಕೆ ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲವೆಂದು 8ನೇ ಸುತ್ತು ತಿರುಗುವ ಮೂಲಕ ಶಪತ ಮಾಡುತ್ತೇನೆ ಎಂದಿದ್ದ. ವರನ ಮಾತು ಕೇಳಿ ವಧು ಖುಷಿಗೊಂಡಿದ್ದಳು.