ಕರ್ನಾಟಕದ ರಾಜಕೀಯ ದೆಹಲಿಯಲ್ಲೂ ಜೋರು ಸದ್ದು ಮಾಡುತ್ತಿದೆ. ಸೋಮವಾರವೂ ಲೋಕಸಭೆಯಲ್ಲಿ ಪ್ರತಿಧ್ವನಿಸಿದ್ದ ಕರ್ನಾಟಕದ ರಾಜಕೀಯ ನಾಟಕ, ಇಂದು ಸಹ ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸಿದೆ. ಆ
ಪರೇಷನ್ ಕಮಲ ಮತ್ತು ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಹೊರನಡೆದು, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜಕೀಯದ ಬಗ್ಗೆ ಮಾತನಾಡಿದ ಲಕಾಂಗ್ರೆಸ್ ನ ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿ, “ಕುದುರೆ ವ್ಯಾಪಾರ ಮೊದಲು ನಿಲ್ಲಬೇಕು. ಇದು ರಾಜಕೀಯಕ್ಕೆ ಒಳಿತಲ್ಲ” ಎಂದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ಕರ್ನಾಟಕದಲ್ಲಿ ಏನಾಘುತ್ತಿದೆಯೋ ಅದು ಕಾಂಗ್ರೆಸ್ ನ ಆಂತರಿಕ ವಿಚಾರ. ಆದರೆ ಅದನ್ನು ಪರಿಹರಿಸಿಕೊಳ್ಳುವ ಸಾಮರ್ಥ್ಯವಿಲ್ಲದ ಕಾಂಗ್ರೆಸ್, ತನ್ನ ಆಂತರಿಕ ವಿಷಯಗಳನ್ನು ಲೋಕಸಭೆಯಲ್ಲಿ ತಂದು ಸದನವೂ ಸರಿಯಾಗಿ ನಡೆಯಲು ಅನುವು ಮಾಡಿಕೊಡದಿರುವುದು ಸರಿಯಲ್ಲ” ಎಂದಿದ್ದಾರೆ.