ಲಾರಿಯಲ್ಲಿ ಲೋಡುಗಟ್ಟಲೆ ಸಿಗುತ್ತಿದ್ದ ಮರಳು ಈಗ ಅಕ್ಕಿಯಂತೆ ಮೂಟೆಯಲ್ಲಿಯೂ ಸಿಗುತ್ತೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದಿಂದ ಮರಳು ಭಾಗ್ಯ ಯೋಜನೆ ರೂಪಿಸಲಾಗಿದೆ.
ಹಣ, ಸೈಟು ಇದ್ದರೂ, ಮರಳು ಅಭಾವದಿಂದ ಮನೆ ಕಟ್ಟಲು ಸಾಧ್ಯವಾಗ್ತಿರಲಿಲ್ಲ. ಲಕ್ಷಗಟ್ಟಲೇ ಹಣ ವ್ಯಯಿಸಬೇಕಿತ್ತು. ಇನ್ಮೇಲೆ ಚಿಂತೆ ಬಿಡಿ, ಚೀಲದಲ್ಲಿ ಸಿಗುತ್ತೆ ಬೇಕಾದಷ್ಟು ಮರಳು.
ಎಂ.ಎಸ್.ಐ.ಎಲ್. ಸಹಯೋಗದಲ್ಲಿ ಮಲೇಷ್ಯಾದಿಂದ ಮರಳು ತರಿಸಲಾಗಿದೆ. ಪ್ರತಿ ಟನ್ ಮರಳಿಗೆ 2300 ರೂ.ಗೆ ಮಾರಾಟ ಮಾಡಲು ಮಲೇಷ್ಯಾ ಕಂಪನಿ ಒಪ್ಪಿದ್ದು, ಕೃಷ್ಣಪಟ್ಟಣಂ ಬಂದರಿಗೆ 50 ಟನ್ ಮರಳು ಬಂದಿದೆ. ಮುಂದಿನವಾರದಿಂದ ಕೆ.ಜಿ. ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ.
50 ಕೆ.ಜಿ. ಮರಳು ಚೀಲಕ್ಕೆ 190 ರೂ. ನಿಗದಿ ಮಾಡಲಾಗಿದೆ. ಇದರಲ್ಲಿ ಪ್ಯಾಕಿಂಗ್ ಚಾರ್ಜ್, ಜಿ.ಎಸ್.ಟಿ. ಎಲ್ಲಾ ಸೇರಿದೆ. ವಾರ್ಷಿಕ 40 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಇದ್ದು, ಮಾಸಿಕ 3 ಲಕ್ಷದಂತೆ 36 ಲಕ್ಷ ಮೆಟ್ರಿಕ್ ಟನ್ ಮರಳು ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದ್ದು, ಮರಳಿನ ಸಮಸ್ಯೆ ಕಡಿಮೆಯಾಗಲಿದೆ.