ಉಪಯುಕ್ತ ಮಾಹಿತಿ

ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲಿರುವ ಈ ಐದು ಡಿಜಿಟ್‌ ನಂಬರ್‌’ನ ಹಿಂದಿರುವ ರಹಸ್ಯ ಏನ್ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

By admin

April 24, 2018

ನೀವು ಕೂಡ ಒಂದಲ್ಲ ಒಂದು ಬಾರಿ ರೈಲಿನಲ್ಲಿ ಪ್ರಯಾಣ ಮಾಡಿರುತ್ತೀರಿ. ಆಗ ಟ್ರೈನ್‌ನ ಪ್ರತಿ ಕಂಪಾರ್ಟ್‌ಮೆಂಟ್‌ನ ಮೇಲೆ ಐದು ಡಿಜಿಟ್‌ ಹೊಂದಿರುವ ಒಂದು ನಂಬರ್‌ ಬರೆದಿರುವುದನ್ನು ನೀವು ಗಮನಿಸಿರುತ್ತೀರಿ.ಈ ಐದು ಡಿಜಿಟ್‌ ನಂಬರ್‌ನ ಹಿಂದಿರುವ ರಹಸ್ಯ ಏನ್ ಗೊತ್ತಾ. ಆದರೆ ಯಾವತ್ತಾದರೂ ಈ ನಂಬರ್‌ ಏನು..? ಯಾಕೆ ಈ ನಂಬರ್‌ ಬರೆಯುತ್ತಾರೆ ಅನ್ನೋದನ್ನು ಯೋಚನೆ ಮಾಡಿದ್ದೀರಾ…?

ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲೆಯೂ ಐದು ಡಿಜಿಟ್‌ನ ಈ ನಂಬರ್‌ ಇರುವುದು ಏಕೆ ಗೊತ್ತಾ..?

ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲೆಯೂ ಐದು ಡಿಜಿಟ್‌ನ ಈ ನಂಬರ್‌ ಇರುತ್ತದೆ. ಈ ನಂಬರ್‌ ಪ್ರತಿಯೊಂದು ಕಂಪಾರ್ಟ್‌ನಿಂದ ಕಂಪಾರ್ಟ್‌ಮೆಂಟ್‌ಗೆ ವಿಭಿನ್ನವಾಗಿರುತ್ತದೆ. ಈ ಐದು ನಂಬರ್‌ಗಳಲ್ಲಿ ಮೊದಲ ಎರಡು ನಂಬರ್‌ ಆ ಕಂಪಾರ್ಟ್‌ಮೆಂಟ್‌ ಅಥವಾ ಬೋಗಿ ತಯಾರಾದ ವರ್ಷವನ್ನು ಸೂಚಿಸಿದರೆ, ನಂತರದ ಮೂರು ನಂಬರ್‌ಗಳು ಆ ವರ್ಷ ಎಷ್ಟು ಕಂಪಾರ್ಟ್‌ಮೆಂಟ್‌ಗಳು ತಯಾರಾಗಿವೆ ಎಂಬುದನ್ನು ಸೂಚಿಸುತ್ತವೆ.

ಉದಾಹರಣೆ ಮೇಲಿನ ಚಿತ್ರದಲ್ಲಿ ಕಾಣಿಸುವ ರೈಲಿನ ಬೋಗಿಯ ನಂಬರ್‌ 00. ಇದರಲ್ಲಿ 00 ಎಂದರೆ ಈ ರೈಲು ಬೋಗಿ 2000ನೇ ಇಸವಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು. ಅದೇ ರೀತಿ ಉಳಿದ ಮೂರು ಡಿಜಿಟ್‌ ಅಂದರೆ 710 ಎಂದರೆ ಆ ವರ್ಷದಲ್ಲಿ ತಯಾರಾದ 00710ನೇ ಕಂಪಾರ್ಟ್‌ಮೆಂಟ್‌ ಇದಾಗಿದೆ ಎಂದರ್ಥ.