ಬೆಂಗಳೂರು: ಅಗಷ್ಟ್ ತಿಂಗಳ 24ಕ್ಕೆ ಅಂತ್ಯಗೊಳ್ಳಲಿದ್ದ ಕೃಷಿ ಬೆಳೆ ಸಮೀಕ್ಷೆಯನ್ನು ಸೆಪ್ಟೆಂಬರ್ ತಿಂಗಳ 24 ತನಕ ವಿಸ್ತರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಕೃಷಿ ಬೆಳೆ ಸಮೀಕ್ಷೆ ಕುರಿತಂತೆ ಸುದೀರ್ಘ ಚರ್ಚೆ ನಡೆದ ಬಳಿಕ ಒಂದು ತಿಂಗಳು ಅವಧಿ ವಿಸ್ತರಿಸುವ ತೀರ್ಮಾನ ಕೈಗೊಂಡಿದೆ.
ಬೆಳೆ ಸಮೀಕ್ಷೆ ವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು . .ಕಳೆದ ವರ್ಷ ಕೇವಲ 3,500 ಮಂದಿ ರೈತರು ಮಾತ್ರ ನೋಂದಣಿ ಮಾಡಿದ್ದರು, ಈ ವರ್ಷ ಅಲ್ಪ ಅವಧಿಯಲ್ಲೇ ದಾಖಲೆ ಪ್ರಮಾಣದಲ್ಲಿಇದುವರೆಗೆ 5.90 ಲಕ್ಷ ರೈತರು ನೋಂದಣಿ ಮಾಡಿಸಿದ್ದಾರೆ, ಪ್ರತಿ ನಿಮಿಷಕ್ಕೆ ಒಂದೂವರೆ ಸಾವಿರ ರೈತರು ಆಪ್‌ಲೋಡ್ ಮಾಡುತ್ತಿದ್ದಾರೆ. 20 ರಿಂದ 25 ಲಕ್ಷಕ್ಕೂ ಹೆಚ್ಚು ರೈತರು ಬೆಳೆ ಸಮೀಕ್ಷೆ ನೋಂದಣಿ ಮಾಡಿಕೊಳ್ಳುವ ವಿಶ್ವಾಸವಿದೆ ಹಾಗಾಗಿ ಇದನ್ನು ಬೆಳೆ ಸಮೀಕ್ಷೆ ಮುಂದಿನ ತಿಂಗಳ 24 ರವರೆಗೆ ವಿಸ್ತರಿಸಿದ್ದೇವೆ ಎಂದು ಕ್ರಷಿ ಸಚಿವ ಬಿ.ಸಿ ಪಾಟೀಲ್ ಸುದ್ದಿ ಗೋಷ್ಟಿ ನಡೆಸಿ ತಿಳಿಸಿದರು.