ವ್ಯಕ್ತಿ ವಿಶೇಷಣ

ರೇಪ್ ತಡೆಯಲು,ಒಳಉಡುಪು ತಯಾರಿಸಿದ 19ವರ್ಷದ ಯುವತಿ..!ಇದು ಹೇಗೆಲ್ಲಾ ಕೆಲಸ ಮಾಡುತ್ತೆ ಗೊತ್ತಾ..?

By admin

April 04, 2018

ಮಹಿಳೆಯರು, ಯುವತಿಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣಗಳು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ.ಅತ್ಯಾಚಾರ ಹಾಗೂ ಬಲವಂತ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಸಹಾಯವಾಗುವಂತಹ ಮಾಡೆಲ್ ಒಂದು ತಯಾರಾಗಿದೆ. ಗ್ರಾಮೀಣ ಭಾಗದಿಂದ ಬಂದ ಯುವತಿಯೊಬ್ಬಳು ‘ಅತ್ಯಾಚಾರ ನಿರೋಧಕ ಅಂಡರ್‌ವೇರ್’ ಶೋಧಿಸಿ ಸಾಧನೆ ಮಾಡಿದ್ದಾಳೆ.

ಹೇಗಿದೆ ಈ ಅತ್ಯಾಚಾರ ನಿರೋಧಕ ಅಂಡರ್‌ವೇರ್…

ಇದು ಸಾಮಾನ್ಯ ಪ್ಯಾಂಟಿಯಲ್ಲ. ಗುಲಾಬಿ ಬಣ್ಣದ ಈ ಅಂಡರ್’ವೇರ್‌ಗೆ ಎಲೆಕ್ಟ್ರಾನಿಕ್ ಟೆಕ್ನಾಲಜಿ ಅಳವಡಿಸಲಾಗಿದೆ. ಇದಕ್ಕೆ ಸ್ಮಾರ್ಟ್ ಲಾಕ್ ಇರುತ್ತದೆ.  ಜಿಪಿಎಸ್ ಎಚ್ಚರಿಕೆ ವ್ಯವಸ್ಥೆ ಹಾಗೂ ವಿಡಿಯೋ ಕ್ಯಾಮರಾ ಅಳವಡಿಕೆಯಾಗಿದೆ. ಅದನ್ನು ಪಾಸ್ವರ್ಡ್ ಮೂಲಕ ಮಾತ್ರ ತೆಗೆಯಲು ಸಾಧ್ಯ.

ಇದು ಹೇಗೆ ಕೆಲಸ ಮಾಡುತ್ತೆ…

ಇದು ಬುಲೆಟ್ ಪ್ರೂಫ್ ಆಗಿದ್ದು, ಚಾಕುವಿನಿಂದ ಕತ್ತರಿಸಿದರೂ ತುಂಡಾಗದು. ವಿಡಿಯೋ ಕ್ಯಾಮರಾದಲ್ಲಿ ಅತ್ಯಾಚಾರಿಯ ಮುಖ ರೆಕಾರ್ಡ್ ಆಗುತ್ತದೆ. ಸಂಭಾಷಣೆಯನ್ನು ಕೂಡ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.ಯಾರಾದರೂ ಅತ್ಯಾಚಾರ ಎಸಗಲು ಬಂದರೆ ಜಿಪಿಎಸ್ ಎಚ್ಚರಿಕೆ ವ್ಯವಸ್ಥೆ ಪೊಲೀಸರಿಗೆ ಸಂದೇಶ ರವಾನಿಸುತ್ತದೆ.

ಹೀಗಾಗಿ ಅಂಡರ್‌ವೇರನ್ನು ಸುಲಭವಾಗಿ ಕಳಚಲು ಆಗದು. ‘ಯಾರಾದರೂ ಕಾಮುಕರು ಮಹಿಳೆಯೊಬ್ಬಳನ್ನು ಚುಡಾಯಿಸಲು ಯತ್ನಿಸಿದರೆ ಇದು ಪೊಲೀಸರಿಗೆ ಹಾಗೂ ಸಾಧನದಲ್ಲಿ ನೋಂದಾಯಿತವಾದ ಸಂಬಂಧಿಕರ ದೂರವಾಣಿಗೆ ಸಂದೇಶ  ಕಳುಹಿಸತ್ತದೆ.. ಹಾಗಾಗಿ ಘಟನಸ್ಥಳಕ್ಕೆ ಪೊಲೀಸರಾಗಲಿ,ಸಂಭಂದಿಕರಾಗಲಿ ಬೇಗೆ ತಲುಪಲು ಇದು ಸಹಾಯ ಮಾಡುತ್ತದೆ ಎಂದು ಸೀನು ಕುಮಾರಿ ಹೇಳಿದ್ದಾರೆ.

ಯಾರಿದು ಸೀನು ಕುಮಾರಿ

ಉತ್ತರಪ್ರದೇಶದ ಫರೂಖಾಬಾದ್‌’ನ 19 ವರ್ಷದ ಸೀನು ಕುಮಾರಿ ಎಂಬ ಯುವತಿಯೇ ಈ ಮಾಡೆಲ್ ತಾಯಾರಿಸಿದ್ದಾರೆ.ಸೀನು ಕುಮಾರಿ ಈ ವಿಶೇಷ ಒಳ ಉಡುಪು ತಯಾರಿಕೆಗಾಗಿ 4300 ರೂ. ಖರ್ಚು ಮಾಡಿದ್ದಾರೆ ಎಂದು ಹೇಳಿದ್ದಾರೆ.