ಜನರ ತೆರಿಗೆ ಹೊರೆ ತಪ್ಪಿಸಲು ಗ್ರಾಹಕರ ಉತ್ಪನ್ನಗಳು ಹಾಗೂ ದಿನ ಬಳಕೆ ವಸ್ತುಗಳ ಮೇಲಿನ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟ) ಕಡಿಮೆ ಮಾಡಿರುವ ಕೇಂದ್ರ ಸರ್ಕಾರ ಈಗ ವಾಷಿಂಗ್‍ಮೆಷಿನ್, ಫ್ರಿಜ್‍ನಂಥ ಗೃಹೋಪಯೋಗಿ ಸಾಧನಗಳ ಸುಂಕ ಕಡಿಮೆ ಮಾಡಲು ಚಿಂತನೆ ನಡೆಸಿದೆ. ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಫ್ರಿಜ್ಡ್, ಏರ್‍ಕಂಡಿಷನರ್, ಡಿಶ್ ವಾಷರ್, ವ್ಯಾಕ್ಯುಮ್ ಕ್ಲೀನರ್ ಮೊದಲಾದ ವಸ್ತುಗಳಿಗೆ ಈಗ ಜಿಎಸ್‍ಟಿಯಲ್ಲಿ ಶೇ.28ರಷ್ಟು ತೆರಿಗೆ ಇದೆ.
ಮುಂದಿನ ಹಂತದ ತೆರಿಗೆ ಕಡಿತದ ವೇಳೆ ಇಂಥ ವಿದ್ಯುತ್ ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಗ್ರಾಹಕರ ಉತ್ಪನ್ನಗಳು ಮತ್ತು ದಿನಬಳಕೆ 177 ವಸ್ತುಗಳ ಮೇಲಿನ ಜಿಎಸ್‍ಟಿ ತೆರಿಗೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಶೇ.28ರಿಂದ ಶೇ.18ಕ್ಕೆ ಅಂದರೆ ಶೇ.10ರಷ್ಟು ಕಡಿಮೆ ಮಾಡಿ ಸುಂಕದ ಹೊರೆಯನ್ನು ಇಳಿಸಿತ್ತು. ಅದಾದ ನಂತರ ಪಂಚತಾರ ಹೊಟೇಲ್‍ಗಳನ್ನು ಹೊರತುಪಡಿಸಿ ಇತರ ರೆಸ್ಟೋರೆಂಟ್‍ಗಳ ಮೇಲಿನ ಜಿಎಸ್‍ಟಿ ತೆರಿಗೆಯನ್ನು ಕಡಿಮೆ ಮಾಡಲಾಗಿತ್ತು. ಸುಂಕವು ಶೇ.18 ರಿಂದ ಶೇ.5ಕ್ಕೆ ಇಳಿದಿತ್ತು.
ಈಗ ಅದು ಶ್ವೇತ ಸರಕುಗಳು(ವೈಟ್ ಗೂಡ್ಸ್) ಅಂದರೆ ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಏರ್‍ಕಂಡಿಷನರ್, ಡಿಶ್ ವಾಷರ್, ವ್ಯಾಕ್ಯುಮ್ ಕ್ಲೀನರ್ ಮೊದಲಾದ ಉತ್ಪನ್ನಗಳು ತೆರಿಗೆ ಇಳಿಕೆ ವ್ಯಾಪ್ತಿಗೆ ಒಳಪಡುವ ನಿರೀಕ್ಷೆ ಇದೆ. ಆದರೆ ತೆರಿಗೆ ಎಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ದೇಶೀಯ ತಯಾರಿಕೆಯ ಉತ್ಪನ್ನಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಕಡಿಮೆ ಆಗಲಿದ್ದು, ಜನಸಮಾನ್ಯರ ಕೈಗೆಟುಕುವ ಬೆಲೆಗಳಲ್ಲಿ ಇವು ಲಭ್ಯವಾಗಲಿದೆ ಎಂದು ಹಣಕಾಸು ಇಲಾಖೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಈ ಕ್ರಮದಿಂದ ಉದ್ಯೋಗಸ್ಥ ವನಿತೆಯರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಇಂಥ ಗೃಹೋಪಯೋಗಿ ಸಾಧನಗಳ ಬೆಲೆ ಕಡಿಮೆಯಾಗುವುದರಿಂದ,