ಉಪಯುಕ್ತ ಮಾಹಿತಿ

ರಿಸರ್ವ್ ಬ್ಯಾಂಕ್ ಕಡೆಯಿಂದ ಏಟಿಎಂ ಬಳಕೆದಾರರಿಗೆ ಸಿಹಿ ಸುದ್ದಿ ..!ತಿಳಿಯಲು ಈ ಲೇಖನ ಓದಿ ..

By admin

December 07, 2017

ಡಿಜಿಟಲ್ ಪೇಮೆಂಟ್ ಗೆ ಉತ್ತೇಜನ ನೀಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ಇದೀಗ ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲಿನ ಶುಲ್ಕವನ್ನು ಕಡಿತ ಮಾಡಲು ನಿರ್ಧರಿಸಿದೆ. ಕಳೆದ ಕೆಲ ದಿನಗಳಲ್ಲಿ ಡೆಬಿಟ್ ಕಾರ್ಡ್ ವಹಿವಾಟಿನಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

ದೇಶದಲ್ಲಿ ಡಿಜಿಟಲ್ ವಹಿವಾಟಿನ ಮೌಲ್ಯ ಶೇ.80ರಷ್ಟು ಏರಿಕೆಯಾಗಿದ್ದು, 2017-18ರಲ್ಲಿ 1,800 ಕೋಟಿಗೆ ತಲುಪುವ ನಿರೀಕ್ಷೆ ಇದೆ. ಈ ವರ್ಷ ಅಕ್ಟೋಬರ್ ವರೆಗೆ 1000 ಕೋಟಿ ರೂಪಾಯಿ ಡಿಜಿಟಲ್ ವಹಿವಾಟು ನಡೆದಿದೆ. ಇನ್ನು ಹಣದುಬ್ಬರ ಹೆಚ್ಚುತ್ತಿರುವುದರಿಂದ ಆರ್ ಬಿ ಐ ರೆಪೋ ರೇಟ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಸರಕು ಮತ್ತು ಸೇವೆಗಳ ಖರೀದಿಗೆ ಡೆಬಿಟ್ ಕಾರ್ಡ್ ಸ್ವೀಕಾರಕ್ಕೆ ಅವಕಾಶ ಮಾಡಿಕೊಡಲು ಆರ್ ಬಿ ಐ ಉದ್ದೇಶಿಸಿದೆ.

ಅಷ್ಟೇ ಅಲ್ಲ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸುವ ಗ್ರಾಹಕರಿಗಾಗಿ ಕೆಲವೊಂದು ವಿಭಾಗಗಳಿಗೆ ಅನ್ವಯವಾಗುವಂತೆ ಮರ್ಚಂಟ್ಸ್ ಡಿಸ್ಕೌಂಟ್ ರೇಟ್ ಕೂಡ ಕೊಡಲಾಗುತ್ತಿದೆ.