ಸಿನಿಮಾ

ರಿತೇಶ್‌ಗೆ ಐಶಾರಾಮಿ ಕಾರ್‌ ಬರ್ತಡೇ ಗಿಫ್ಟ್ ನೀಡಿದ ಪತ್ನಿ,ಕಾರಿನ ಬೆಲೆ ಎಷ್ಟು ಗೊತ್ತಾ..?ತಿಳಿಯಲು ಇದನ್ನು ಓದಿ..

By admin

December 25, 2017

ಎಲೊನ್ ಮಸ್ಕ್ ಅವರ ಟೆಸ್ಲಾ ಮೋಟಾರ್ಸ್ ಸದ್ಯದಲ್ಲೇ ಮಾಡೆಲ್ 3 ಎಲೆಕ್ಟ್ರಿಕ್ ಕಾರನ್ನು ಭಾರತದ ರಸ್ತೆಗಿಳಿಸುವುದಾಗಿ ಹೇಳಿದೆ. ಇನ್ನೊಂದ್ಕಡೆ ನಟ ರಿತೇಶ್ ದೇಶ್ಮುಖ್ ಮಾಡೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್ ಯು ವಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಾಲಿವುಡ್‌ ನಟ ರಿತೇಶ್‌ ದೇಶ್‌ಮುಖ್‌ರಿಗೆ ಅವರ ಪತ್ನಿ ಜೆನಿಲಿಯಾ ಡಿಸೋಜಾ ಲಗ್ಷುರಿ ಕಾರೊಂದನ್ನು ಗಿಫ್ಟ್‌ ನೀಡಿದ್ದಾರೆ. ಅಂದ ಹಾಗೇ ಮಾಡೆಲ್‌ ಎಕ್ಸ್‌ ಎಲೆಕ್ಟ್ರಿಕ್‌ ಎಸ್‌ಯುವಿ ದುಬಾರಿ ಕಾರನ್ನು ಅವರು ನೀಡಿದ್ದಾರೆ.

ಇತ್ತೀಚೆಗಷ್ಟೆ ರಿತೇಶ್ 40ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬರ್ತಡೇ ಗಿಫ್ಟ್ ಆಗಿ ಪತ್ನಿ ಜೆನಿಲಿಯಾ ಈ ಐಷಾರಾಮಿ ಕಾರನ್ನು ನೀಡಿದ್ದಾರೆ. ಭಾರತದಲ್ಲಿ ಈ ಕಾರನ್ನು ಹೊಂದಿರುವ ಎರಡನೇ ವ್ಯಕ್ತಿ ರಿತೇಶ್ ದೇಶ್ಮುಖ್.

ಈ ಕಾರಿನ ಸ್ಪೆಷಾಲಿಟಿ ಅಂದ್ರೆ ಹಿಂದಿನ ಬಾಗಿಲುಗಳು ಮೇಲ್ಮುಖವಾಗಿ ತೆರೆದುಕೊಳ್ಳುತ್ತವೆ. 7 ಜನರು ಇದರಲ್ಲಿ ಆರಾಮಾಗಿ ಪ್ರಯಾಣಿಸಬಹುದು. ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದ್ರೆ ಈ ಕಾರು 470 ಕಿಮೀ ಓಡಬಲ್ಲದು. ಇದರ ಬೆಲೆ ಸರಿಸುಮಾರು 55 ಲಕ್ಷ ರೂಪಾಯಿ.

ತಮ್ಮ ಪತ್ನಿ ಉಡುಗೊರೆಯಾಗಿ ನೀಡಿರುವ ಕೆಂಪು ಬಣ್ಣದ ಈ ಕಾರೊಂದಿಗೆ ನಿಂತಿರುವ ಫೋಟೊವನ್ನು ಟ್ವಿಟ್ ಮಾಡಿರುವ ರಿತೇಶ್‌ ದೇಶ್‌ಮುಖ್‌ ನನ್ನ ಪತ್ನಿಗೆ 40 ವರ್ಷದವರಿಗೆ 20 ರ ಹರೆಯದವರಂತೆ ಫೀಲ್‌ ಬರಿಸುವ ಕಲೆ ಗೊತ್ತಿದೆ ಎಂದು ಬರೆದುಕೊಂಡಿದ್ದಾರೆ. ಅತ್ಯಾಧುನಿಕ ಸೌಕರ್ಯಗಳುಳ್ಳ ಈ ಕಾರಿನ ಬೆಲೆ ಅಮೆರಿಕದಲ್ಲಿ 55 ಲಕ್ಷ ರೂ. ಆರಂಭವಾಗುತ್ತದೆ ಎನ್ನಲಾಗಿದೆ.