ಸುದ್ದಿ

ರಾಜ್ಯ ಸರ್ಕಾರದಿಂದ ನೆರೆ ಸಂತ್ರಸ್ತರಿಗೊಂದು ಸಿಹಿ ಸುದ್ದಿ….!

By admin

September 23, 2019

ನೆರೆ ಸಂತ್ರಸ್ತ ಕುಟುಂಬಗಳಿಗೆ ಒಂದೇ ಕಂತಿನಲ್ಲಿ ಮನೆ ಬಾಡಿಗೆ ಹಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. 5 ತಿಂಗಳ ಮನೆಯ ಬಾಡಿಗೆಯನ್ನು ಒಂದೇ ಕಂತಿನಲ್ಲಿ ನೀಡಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಅವರು, ನೆರೆ ಸಂತ್ರಸ್ಥರಿಗಾಗಿ ಮನೆ ಬಾಡಿಗೆಗೆ ಮಾಸಿಕ 5000 ರೂ. ನೀಡಲಾಗಿದೆ. ಮಾಲೀಕರು ಮುಂಗಡ ಹಣ ಕೊಡುವಂತೆ ಕೇಳುವುದರಿಂದ 5 ತಿಂಗಳ ಬಾಡಿಗೆ 25 ಸಾವಿರ ರೂ.ಗಳನ್ನು ಒಂದೇ ಕಂತಿನಲ್ಲಿ ನೀಡಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರವಾಹಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಅಕ್ರಮ ತಡೆಯುವ ಉದ್ದೇಶದಿಂದ ಚೆಕ್ ನೀಡುವ ಬದಲುಆರ್.ಟಿ.ಜಿ.ಎಸ್. ಮೂಲಕ ಸಂತ್ರಸ್ತರ ಖಾತೆಗಳಿಗೆ ಹಣ ಪಾವತಿಸಲಾಗುವುದು.

ಮಳೆಹಾನಿಯ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಲಿದೆ ಎಂದು ಅವರುಹೇಳಿದ್ದಾರೆ.