ಶನಿವಾರ ಆರಂಭವಾದ ರಾಜೀನಾಮೆ ಪರ್ವ ತಾತ್ಕಾಲಿಕ ಬ್ರೇಕ್ ಪಡೆದುಕೊಂಡಿದ್ದರೂ ಸೋಮವಾರ ಮತ್ತೆ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ.
ಅಮೆರಿಕ ಪ್ರವಾಸದಲ್ಲಿದ್ದ ಸಿಎಂ ಕುಮಾರಸ್ವಾಮಿ ಆಗಮಿಸಿದ್ದು ಡ್ಯಾಮೇಜ್ ಕಂಟ್ರೋಲ್ ಗೆ ಇರುವ ತಂತ್ರಗಳನ್ನು ಮೊದಲು ಹುಡುಕುತ್ತಿದ್ದಾರೆ. ಕುಮಾರಸ್ವಾಮಿ ವಿಮಾನ ನಿಲ್ದಾಣದಿಂದ ಬಂದವರೆ ತಕ್ಷಣ ಸಭೆ ಮೇಲೆ ಸಭೆ ಆರಂಭಿಸಿದರು.
ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ಪರಮೇಶ್ವರ ಸೇರಿದಂತೆ ಎಲ್ಲ ಪ್ರಮುಖರು ಅತೃಪ್ತರ ಸವಾಲು ಮೆಟ್ಟಿ ನಿಲ್ಲಲು ಏನು ಮಾಡಬೇಕು ಎಂದು ಚರ್ಚೆ ನಡೆಸಿದರು.
ಆದರೆ ಅಂತಿಮವಾಗಿ ಜೆಡಿಎಸ್ -ಕಾಂಗ್ರೆಸ್ ಸಭೆ ಅಪೂರ್ಣವಾಗಿದ್ದು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸೋಮವಾರ ಬೆಳಗ್ಗೆ ಮತ್ತೆ ರಾಜಕೀಯ ಹೈಡ್ರಾಮಾ ಮುಂದುವರಿಯಲಿದ್ದು ಇದೀಗ ರಾಜಕೀಯ ಹೈಡ್ರಾಮಾಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.