ರಾಜಕೀಯ

ಇವಿಎಂನಲ್ಲಿದ್ದ ವೋಟ್ ಗಳನ್ನು ಡಿಲೀಟ್ ಮಾಡಿದ ಅಧಿಕಾರಿಗಳು…!

By admin

May 22, 2019

ಡಮ್ಮಿ ವೋಟ್ ಗಳನ್ನು ಡಿಲೀಟ್ ಮಾಡುವ ಬದಲು ಅಸಲಿ ಮತಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ.ಹಿಮಾಚಲ ಪ್ರದೇಶದಲ್ಲಿ ಭಾನುವಾರ ಕೊನೆ ಹಂತದ ಮತದಾನ ನಡೆದಿದ್ದು, ಈ ಸಂದರ್ಭದಲ್ಲಿ ಇವಿಎಂನಲ್ಲಿದ್ದ ಡಮ್ಮಿ ಮತಗಳನ್ನು ಡಿಲೀಟ್ ಮಾಡುವ ಬದಲು ಅಸಲಿ ಮತಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ. ಹೀಗೆ ಕರ್ತವ್ಯಲೋಪವೆಸಗಿದ 20 ಚುನಾವಣೆ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತು ಮಾಡುವ ಸಾಧ್ಯತೆ ಇದೆ.

ಮತಗಟ್ಟೆಗಳಲ್ಲಿ ಮತದಾನ ಆರಂಭಕ್ಕೆ ಮೊದಲು ಇವಿಎಂಗಳ ಪರೀಕ್ಷೆಗಾಗಿ ಡಮ್ಮಿ ವೋಟಿಂಗ್ ಮಾಡಲಾಗುತ್ತದೆ. ಮತದಾನ ಆರಂಭವಾದಾಗ ಡಮ್ಮಿ ವೋಟ್ ಗಳನ್ನು ಡಿಲೀಟ್ ಮಾಡಲು ಮತಗಟ್ಟೆ ಸಿಬ್ಬಂದಿ ಮರೆತಿದ್ದರು.

ಪೋಲಿಂಗ್ ಏಜೆಂಟ್ ಗಳ ಉಪಸ್ಥಿತಿಯಲ್ಲಿ ಡಮ್ಮಿ ವೋಟ್ ಡಿಲೀಟ್ ಮಾಡಲು ಮುಂದಾಗಿದ್ದು, ಈ ವೇಳೆ ಅಸಲಿ ವೋಟ್ ಗಳನ್ನು ಕೂಡ ಡಿಲೀಟ್ ಮಾಡಲಾಗಿದೆ.

ಚುನಾವಣಾ ವೀಕ್ಷಕರು ಈ ಕುರಿತು ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ 5 ಚುನಾವಣಾ ಅಧಿಕಾರಿಗಳು ಹಾಗೂ 15 ಸಿಬ್ಬಂದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲು ಮುಂದಾಗಿದೆ.