ದಿನೇ ದಿನೆ ರಾಜ್ಯ ರಾಜಕಾರಣ ಕುತೂಹಲ ಕೆರೆಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡ ರವರ ಕಿರಿಯ ಪುತ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೇ ಶನಿವಾರ ಅವರು ನಗರದ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕುಮಾರ ಪರ್ವ ಬೈಕ್ ರ‍್ಯಾಲಿಗೆ ಚಾಲನೆ ನೀಡುವ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸುವ ಕಾರ್ಯಕ್ಕೆ ಅಡಿಪಾಯ ಹಾಕಿದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಅವರು ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ, 5 ವರ್ಷದಿಂದ ಇಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ. ಪ್ರಸ್ತುತ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಎಲ್ಲರೂ ಒಗ್ಗೂಡಿ ಹೋಗುವಂತೆ ಹೇಳಲು ಇಂದು ಆಗಮಿಸಿದ್ದೇನೆ ಎಂದು ರಮೇಶ್ ತಿಳಿಸಿದರು.
ಕುತೂಹಲ ಕೆರಳಿಸಿರುವ ರಾಜ್ಯ ರಾಜಕಾರದಲ್ಲಿ ಸದಾ ಕುತೂಹಲದ ಕೇಂದ್ರ ಬಿಂದುವಾಗಿರುವ ಮಂಡ್ಯದಲ್ಲಿ ಜೆಡಿಎಸ್ ಹೊಣೆಗಾರಿಕೆಯನ್ನು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಕಿರಿಯ ಪುತ್ರ ಡಾ. ಎಚ್.ಡಿ. ರಮೇಶ್ ಅವರಿಗೆ ವಹಿಸಲಾಗಿದೆ.
ಮಂಡ್ಯ ರಾಜಕಾರಣದ ಜವಾಬ್ದಾರಿಯನ್ನು ರಮೇಶ್ ರವರಿಗೆ ವಯಿಸಿರುವುದು ದೇವೇಗೌಡ ರವರಿಗೆ ಸಂತೋಷವಾಗಿದೆ ಎಂದು ಆಪ್ತ ವಲಯ ತಿಳಿಸಿದೆ.