ದೇವರು-ಧರ್ಮ

ಯುಗಾದಿಯ ಹಬ್ಬದ ಮಹತ್ವವೇನು.?ಸಾಂಪ್ರದಾಯಿಕವಾಗಿ ಆಚರಿಸುವುದು ಹೇಗೆ.?ಹಬ್ಬದ ಹಿಂದಿರುವ ಪುರಾಣ ಕತೆ ಏನು.?ತಿಳಿಯಲು ಈ ಲೇಖನಿ ಓದಿ ಮರೆಯದೇ ಶೇರ್ ಮಾಡಿ…

By admin

March 17, 2018

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ  ವರಕವಿ ಬೇಂದ್ರೆಯವರ ಈ ಕವನ ಯಾರಿಗೆ ತಾನೇ ಗೊತ್ತಿಲ್ಲ..

ನಮ್ಮ ತಂಡದಿಂದ ಯುಗಾದಿ ಮತ್ತು ಹೊಸವರ್ಷದ ಆರ್ಥಿಕ ಶುಭಾಶಯಗಳು…

ಯುಗಾದಿ ಅಂದ್ರೆ ಏನು…

ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು.

ಹಿಂದೂಗಳ ಹೊಸ ವರ್ಷ…

ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದೆ.’ ಜನವರಿ 1ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವುದೇ ಕಾರಣ ಇಲ್ಲ. ಯಾರೋ ಒಬ್ಬರು ನಿರ್ಧರಿಸಿದರು ಮತ್ತು ಅದು ಪ್ರಾರಂಭವಾಯಿತು. ತದ್ವಿರುದ್ಧವಾಗಿ, ಚೈತ್ರ ಶುಕ್ಲ ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.

ಯುಗಾದಿಯ ಬಗ್ಗೆ ಪುರಾಣ ಹೇಳುವುದೇನು..?

*ಬ್ರಹ್ಮಪುರಾಣಕ್ಕನುಸಾರ ಈಶ್ವರನು ಈ ದಿನದಂದು ವಿಶ್ವದ ನಿರ್ಮಿತಿ ಮಾಡಿದನು. ಶ್ರೀರಾಮಚಂದ್ರನು 14 ವರ್ಷಗಳ ವನವಾಸದ ನಂತರ ರಾವಣನನ್ನು ಕೊನೆ ಗಾಣಿಸಿ ಚೈತ್ರ ಶುಕ್ಲ ಪಕ್ಷ ಪ್ರತಿಪದೆಗೆ ಅಯೋಧ್ಯೆಗೆ ಮರಳಿದನು; ಆದ್ದರಿಂದ ಆ ದಿನದಂದು ಬ್ರಹ್ಮಧ್ವಜಗಳನ್ನು, ತೋರಣಗಳನ್ನು ಕಟ್ಟಿ ಆನಂದದಿಂದ ಅವನನ್ನು ಸ್ವಾಗತಿಸಲಾಯಿತು. ಆ ದಿನದಿಂದ ರಾಮನ ನವರಾತ್ರಿ ಪ್ರಾರಂಭವಾಗುತ್ತದೆ. ಪೈಠಣದ ಸಾತವಾಹನ (ಶಾಲಿವಾಹನ) ವಂಶದ ಗೌಮತಿಪುತ್ರ ಮತ್ತು ಪುಸುಯಾರ್ಮಿ ಈ ಪರಾಕ್ರಮಿ ರಾಜರು ಶತ್ರುಗಳನ್ನು ಪರಾಭವಗೊಳಿಸಿ ವಿಜಯ ಪಡೆದ ಸ್ಮರಣೆಗಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ.

*ಇಂದಿನ ದಿನವೇ ವಿಷ್ಣುವು ಮತ್ಸ್ಯಾವತಾರವನ್ನು ತಳೆದದ್ದೆಂದೂ, ಶಾಲಿವಾಹನ ವಿಕ್ರಮಾದಿತ್ಯನನ್ನು ಜಯಿಸಿ ಶಾಲಿವಾಹನ ಶಕೆ ಎಂದೂ ನವಭಾರತವನ್ನು ನಿರ್ಮಿಸಿದರೆಂದೂ ಚರಿತ್ರೆಯಲ್ಲಿ ನಮೂದಿಸಿರುವರು.

*ಈ ದಿನವೇ ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು, ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಇದು ಈ ದಿನ ವರ್ಷಾರಂಭ ಮಾಡುವ ಹಿಂದಿನ ಆಧ್ಯಾತ್ಮಿಕ ಕಾರಣವಾಗಿದೆ.

ಸಾಂಪ್ರದಾಯಿಕವಾಗಿ ಯುಗಾದಿಯನ್ನು ಆಚರಿಸುವುದು ಹೇಗೆ…

ಯುಗಾದಿ ಆಚರಣೆಯ ವಿಧಾನ..

ಯುಗಾದಿಯ ವಿಶೇಷ ತಿನಿಸು…

ಬೇವು-ಬೆಲ್ಲದ ಮಹತ್ವ…

ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಮೂಲ