ಸ್ವತಂತ್ರ ಹೋರಾಟಗಾರರು, ಕವಿಗಳು, ಸೈನಿಕರು, ಸಿನಿಮಾ ಕಲಾವಿದರು, ಕ್ರೀಡಾಪಟುಗಳು, ಕುರಿತು ಹಲವು ಚಿತ್ರಗಳು ತೆರೆಮೇಲೆ ಬಂದಿವೆ.
ಈಗ ಕರ್ನಾಟಕದ ರಾಜಕಾರಣಿಗಳ ಕುರಿತು ಸಿನಿಮಾವಾಗ್ತಿವೆ. ಹೌದು.. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಚ ಎಚ್ ಡಿ ಕುಮಾರಸ್ವಾಮಿ ಅವರ ಭೂಮಿಪುತ್ರ ಸಿನಿಮಾಗೆ ಚಾಲನೆ ನೀಡಲಾಯಿತು. ಎಸ್. ನಾರಾಯಣ್ ನಿರ್ದೇಶನವಿರುವ ‘ಭೂಮಿಪುತ್ರ’ ಸಿನಿಮಾದಲ್ಲಿ ಹೆಚ್.ಡಿ.ಕೆ. ಪಾತ್ರದಲ್ಲಿ ಅರ್ಜುನ್ ಸರ್ಜಾ ಅಭಿನಯಿಸಿದ್ದಾರೆ. ಇದೀಗ ಇದಕ್ಕೆ ಸೆಡ್ಡು ಹೊಡೆಯಲು ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯೊಬ್ಬರ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಮೂಡಿ ಬರಲಿದೆ.
ಹೌದು.. ಬಿಜೆಪಿಯ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಕುರಿತಾದ ಸಿನಿಮಾವನ್ನು ಮಾಡಲು ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ.
ಇನ್ನು ಯಡಿಯೂರಪ್ಪ ಅವರ ಕುರಿತಾದ ಸಿನಿಮಾ ನಿರ್ಮಾಣಕ್ಕೆ ಬಿ.ಜೆ.ಪಿ. ಮುಖಂಡ ರುದ್ರೇಶ್ ಮುಂದಾಗಿದ್ದಾರೆ. ಇದು ಯಡಿಯೂರಪ್ಪ ಅವರ ಸಂಪೂರ್ಣ ಜೀವನದ ಚಿತ್ರವಾಗಿದ್ದು, ಇದರಲ್ಲಿ ಅವರ ಬಾಲ್ಯ, ಜೀವನ, ರೈತ ಹೋರಾಟ, ಸರ್ಕಾರ ರಚನೆ ಹೀಗೆ ಹಲವು ರೀತಿಯ ವಿಚಾರಗಳನ್ನು ಸಿನಿಮಾ ಒಳಗೊಂಡಿರುತ್ತದೆ.
ಈ ಚಿತ್ರವನ್ನು ಎಂ.ಎಸ್. ರಮೇಶ್ ನಿರ್ದೇಶಿಸಲಿದ್ದು, ಯಡಿಯೂರಪ್ಪ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕಾಣಿಸಿಕೊಳ್ಳುವ ಸುದ್ದಿಯಿದೆ.
ಈ ಚಿತ್ರಕ್ಕೆ ನೇಗಿಲ ಯೋಗಿ, ಮಣ್ಣಿನ ಮಗ ಎಂಬ ಟೈಟಲ್ ನೋಂದಾಣಿ ಮಾಡಲಾಗಿದೆ. ಆದರೆ ಇದರಲ್ಲಿ ಯಾವುದು ಅಂತಿಮ ಎಂಬುವುದು ಇನ್ನೂ ತೀರ್ಮಾನವಾಗಬೇಕಿದೆ.
ಬಿಜೆಪಿಯ ಮುಖಂಡ ರುದ್ರೇಶ್ ಎನ್ನುವರು ಚಿತ್ರದ ನಿರ್ಮಾಪಕರಾಗಿದ್ದಾರೆ.
ಬಿಎಸ್ ವೈ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಕಾಣಿಸಿಕೊಳ್ಳಲಿದ್ದಾರೆ. ಹಾಗೂ ಶೃತಿ, ಕುಮಾರ್ ಬಂಗಾರಪ್ಪ, ಶ್ರೀನಗರ ಕಿಟ್ಟಿ, ಜಗ್ಗೇಶ್ ಇತರರು ಕಾಣಿಸಿಕೊಳ್ಳಲಿದ್ದಾರೆಂಬ ಸುದ್ದಿಯಿದೆ.