ಸರ್ಕಾರದ ಯೋಜನೆಗಳು

ಮೋದಿ ಸರ್ಕಾರದ ಮತ್ತೊಂದು ಯೋಜನೆ …!ತಿಳಿಯಲು ಈ ಲೇಖನ ಓದಿ..

By admin

December 30, 2017

ಮೂಡೀಸ್ ರೇಟಿಂಗ್ ಕೇಂದ್ರಕ್ಕೆ ಹೊಸ ಚೈತನ್ಯ ತುಂಬಿದಂತಿದೆ. ನೋಟ್ ಬ್ಯಾನ್, ಜಿ.ಎಸ್.ಟಿ ಅನ್ನು ವಿಷಯವಾಗಿರಿಸಿಕೊಂಡು ಕೇಂದ್ರವನ್ನು ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚುವಂತೆ ಮಾಡಿದೆ ಮೂಡೀಸ್ ರೇಟಿಂಗ್.

ಮೂಡಿಸ್ ರೇಟಿಂಗ್ ಸಿಕ್ಕಿದ್ದರಿಂದ ಉತ್ಸಾಹ ಹೆಚ್ಚಿಸಿಕೊಂಡಿರುವ ಕೇಂದ್ರ ಸರ್ಕಾರ ಹಣಕಾಸು ಇಲಾಖೆ. ಈಗ ಮತ್ತೊಂದು ದಿಟ್ಟ ಹೆಜ್ಜೆ ಇಡಲು ಹೊರಟಿದೆ. ಅಂದು ಕೊಂಡತೆ ನಡೆದರೆ ಹಣಕಾಸು ವ್ಯವಹಾರ ಹೆಚ್ಚು ಪಾರದರ್ಶಕವಾಗಿ ತೆರಿಗೆ ಸೋರಿಕೆ ಗಣನೀಯವಾಗಿ ಕಡಿಮೆಯಾಗಲಿದೆ.

ನೂರು ಕೋಟಿ ಆಧಾರ್ ಕಾರ್ಡ್ಗಳನ್ನು ನೂರು ಕೋಟಿ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡುವ ಗುರಿ ನಿಗದಿಪಡಿಸಿಕೊಂಡಿದೆ.

ಈ ಗುರಿ ಈಡೇರಿದರೆ ಚಲಾವಣೆಯಲ್ಲಿರುವ 6 ಲಕ್ಷ ಕೋಟಿಯಷ್ಟು ಹೆಚ್ಚಿನ ಮೌಲ್ಯದ ನೋಟುಗಳ ಸಂಖ್ಯೆ ಕಡಿಮೆಯಾಗುತ್ತದೆ ಹಾಗೂ ಡಿಜಿಟಲ್ ವ್ಯವಹಾರಕ್ಕೆ ಭಾರಿ ಉತ್ತೇಜನ ಸಿಗುತ್ತದೆ ಎಂದು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಆದಷ್ಟು ಬೇಗನೇ ಈ ‘ನೂರು ಕೋಟಿ’ ಮಿಷನ್ ಪೂರೈಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಗುರಿ ಈಡೇರಿಸಲು ಯಾವುದೇ ನಿಗದಿತ ದಿನಾಂಕದ ಗಡಿ ನಿಗದಿಪಡಿಸಿಕೊಂಡಿಲ್ಲ ಆದರೆ ಈ ನಿಟ್ಟಿನಲ್ಲಿ ವೇಗವಾಗಿ ಕಾರ್ಯ ನಡೆಯುತ್ತಿದೆ.