ಕೇಂದ್ರದಲ್ಲಿ ಮೋದಿ ಸರ್ಕಾರ ಬಂದಾಗಿನಿಂದ, ದೇಶದಲ್ಲಿ ಒಂದಲ್ಲ ಒಂದು ಬದಲಾವಣೆಗಳು ಆಗುತ್ತಿವೆ. ಎಲ್‍ಇಡಿ ಬಲ್ಬ್ಗಳ ಬೆಲೆಯನ್ನು 300 ರೂ.ನಿಂದ 40 ರೂ. ಗೆ ಇಳಿಸುವಲ್ಲಿ ಸಫಲವಾಗಿದ್ದ ಸರ್ಕಾರ, ಈಗ ವಿದ್ಯುತ್ ಮೀಟರ್’ಗಳಲ್ಲಿ ಬದಲಾವಣೆ ತರಲು ಮುಂದಾಗಿದೆ.
ಎಲ್‍ಇಡಿ ಬಲ್ಬ್ಗಳನ್ನು ಕಡಿಮೆ ಬೆಲೆಗೆ ವಿತರಿಸಿದ ಹಾಗೆ , ಮನೆ ಹಾಗೂ ಕಚೇರಿಗಳಿಗೆ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್‍ಗಳ ಬೆಲೆಯನ್ನು ಇಳಿಸಲು ಚಿಂತನೆ ನಡೆಸಿದೆ.
ವರದಿಗಳ ಪ್ರಕಾರ ಸುಮಾರು 10 ರಿಂದ 15 ಸಾವಿರ ರೂ. ಬೆಲೆಯಿರುವ ವಿದ್ಯುತ್ ಮೀಟರ್‍ಗಳು 1 ಸಾವಿರ ರೂ.ಗೆ ಇಳಿಕೆಯಾಗಲಿದೆ. ಎಂದು ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಲಕ್ಷಾಂತರ ಹೊಸ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್‍ಗಳನ್ನು ಖರೀದಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಈ ಯೋಜನ ಜಾರಿಯಿಂದ ಆಗುವ ಅನುಕೂಲಗಳು:-
- ವಿದ್ಯುತ್ ಕಳ್ಳತನ ತಡೆಗಟ್ಟಬಹುದು.
- ರೀಡಿಂಗ್ನಲ್ಲಿ ನಡೆಯುವ ಮೋಸ ತಡೆಯಬಹುದು.
- ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್‍ಗಳು ನಕಲು ಮಾಡಲು ಸಾಧ್ಯವಿಲ್ಲ.
- ಮೀಟರ್ ರೀಡಿಂಗ್’ಗಳು ನೇರವಾಗಿ ಕಂಪ್ಯೂಟರ್’ಗೆ ಹೋಗುತ್ತೆ.
- ಲೈನ್ಮನ್ಗಳಿಗೆ ಮೀಟರ್ ರೀಡಿಂಗ್ ಕೆಲಸ ಇರುವುದಿಲ್ಲ.
ಮೊದಲಿಗೆ ಇದರ ಬೆಲೆಯನ್ನು 2 ಸಾವಿರದಿಂದ 1500 ರವರೆಗೆ ಇಳಿಸಿ ಕೊನೆಗೆ 1 ಸಾವಿರ ರೂ. ಗಿಂತಲೂ ಕಡಿಮೆಗೆ ಇಳಿಸುವ ಪ್ರಯತ್ನ ಇದಾಗಿದೆ ಅಂದ್ರು. ಹರಿಯಾಣಾದಲ್ಲಿ ಇದೇ ರೀತಿಯ ಯೋಜನೆಗೆ ಮುಂದಾಗಿರುವ ಬಗ್ಗೆ ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್‍ಗಳು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ:-
ಇಡೀ ವಿಶ್ವದಲ್ಲೇ ಈ ರೀತಿಯ ಸಾಧನ ತಯಾರಿಸವಲ್ಲಿ ಭಾರತ ಅತ್ಯುತ್ತಮ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿರುವುದರಿಂದ ಈ ಮೀಟರ್‍ಗಳು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಆಗಿರಲಿವೆ ಅಂತ ಹೇಳಿದ್ದಾರೆ. ಇಲ್ಲಿ ಓದಿ:-ಮೋದಿ ಸರ್ಕಾರದಿಂದ,ಆಗಸ್ಟ್ 15ರ ನಂತರ ಭ್ರಷ್ಟ ಅಧಿಕಾರಿಗಳಿಗೆ ಕಾದಿದೆ ಮಾರಿ ಹಬ್ಬ!
ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಅಂತ ಪಿಯೂಶ್ ಗೋಯಲ್ ತಿಳಿಸಿದ್ದಾರೆ.