ಉಪಯುಕ್ತ ಮಾಹಿತಿ

ಮೋದಿ ಸರ್ಕಾರದ ಈ ಯೋಜನೆಯಿಂದ ಪ್ರತೀ ಕುಟುಂಬಕ್ಕೆ ಸಿಗಲಿದೆ 5 ಲಕ್ಷ ರೂಗಳು.!ಏನಿದು ಯೋಜನೆ.?ತಿಳಿಯಲು ಈ ಲೇಖನ ಓದಿ ಎಲ್ಲರಿಗೂ ಶೇರ್ ಮಾಡಿ ಉಪಯೋಗವಾಗಲಿ…

By admin

March 23, 2018

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಬಜೆಟ್ ಮಂಡಿಸಿದ್ದು, ಈ ಬಜೆಟ್’ನಲ್ಲಿ ಬಡವರಿಗೆ ಬಿಪಿಎಲ್ ಕಾರ್ಡುದಾರರಿಗೆ ಆರೋಗ್ಯದ ವಿಚಾರವಾಗಿ ಬಂಪರ್ ಕೊಡುಗೆಯನ್ನು ಘೋಷಿಸಿದ್ದರು.

ಹೌದು, ಕೇಂದ್ರಸರ್ಕಾರದ ಮಹತ್ವದ ಯೋಜೆನೆಯಾದ ‘ಆಯುಷ್ಮಾನ್ ಭಾರತ್’ ವಿಮೆ ಯೋಜನೆ ಈಗಾಗಲೇ ಜಾರಿಯಾಗಿದ್ದು, ಈ ಯೋಜನೆಯಿಂದ ಬಡವರು ಮತ್ತು ಬಿಪಿಎಲ್ ಕಾರ್ಡುದಾರರು ಸೇರಿದಂತೆ ಭಾರತದ  ಸುಮಾರು 10 ಕೋಟಿ ಕುಟುಂಬಗಳಿಗೆ ಈ ಯೋಜನೆಯಿಂದ ಉಪಯೋಗವಾಗಲಿದೆ.ಈ ಕುಟುಂಬಗಳು ವಾರ್ಷಿಕವಾಗಿ 5 ಲಕ್ಷ ರೂಪಾಯಿಗಳನ್ನು ಆಸ್ಪತ್ರೆ ವೈದ್ಯಕೀಯ ಖರ್ಚಿಗಾಗಿ, ಈ ವಿಮಾ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಕೊಡಲಿದೆ.

“ಆಯುಷ್ಮಾನ್ ಭಾರತ್” ವಿಮೆ ಯೋಜನೆಯು ಏನನ್ನೆಲ್ಲಾ ಒಳಗೊಂಡಿದೆ…

*ಆಸ್ಪತ್ರೆಗೆ ದಾಖಾಲಾಗಿ, ಮನೆಗೆ ಹೊರಡುವವರೆಗಿನ ಆಸ್ಪತ್ರೆ ಖರ್ಚು ವೆಚ್ಚಗಳನ್ನು ಈ ವಿಮೆ ಒಳಗೊಂಡಿರುತ್ತದೆ.

*ಭಾರತ ದೇಶದ ಯಾವುದೇ ಆಸ್ಪತ್ರೆಯಲ್ಲಿ ಈ ವಿಮಾ ಆರರೋಗ್ಯ ಯೋಜನೆಯನ್ನು ಉಚಿತವಾಗಿ ಪಡೆಯಬಹುದು.

*ಸುಮಾರು 1347 ಚಿಕಿತ್ಸೆ ಸೇವೆಗಳು ಯೋಜನೆಯಡಿಯಲ್ಲಿ ದೊರೆಯಲಿವೆ.

*ಸುಮಾರು 10 ಕೋಟಿ ಕುಟುಂಬಗಳಿಗೆ ಈ ಯೋಜನೆಯಿಂದ ಲಾಭವಾಗಲಿದೆ.

*ಫಲಾನುಭವಿ ಪ್ರತೀ ಕುಟುಂಬ ವರ್ಷಕ್ಕೆ 5 ಲಕ್ಷ ಆರೋಗ್ಯ ವಿಮಾ ಯೋಜನೆ ಪಡೆಯಲಿದ್ದಾರೆ.

*ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಗೆ ಮಾಡಲಾಗುತ್ತದೆ.

*ಖಾಸಗಿ ಆಸ್ಪತ್ರೆಗಳಲ್ಲಿ ಆನ್’ಲೈನ್ ಮುಖಾಂತರ ಜಾರಿಗೆ ಮಾಡಲಾಗುತ್ತದೆ.

ಆಸ್ಪತ್ರೆಗಳು ದುಬಾರಿ ವೆಚ್ಚ ಹಾಕಿದ್ರೆ…

ಆಸ್ಪತ್ರೆಗಳು ಫಲಾನುಭವಿಗಳಿಗೆ ಅಧಿಕ ಚಿಕಿತ್ಸಾ ವೆಚ್ಚವನ್ನು ಹಾಕದಂತೆ ತಡೆಯಲು ಏಕರೂಪದ ದರ ಪಟ್ಟಿಯನ್ನು ಆರೋಗ್ಯ ಮಂತ್ರಾಲಯ ನಿಗದಿ ಮಾಡಲು ಕ್ರಮಕೈಗೊಂಡಿದೆ.

“ಆಯುಷ್ಮಾನ್ ಭಾರತ್” ಯೋಜನೆ ಅಡಿಯಲ್ಲಿ ಬರುವ ವೆಚ್ಚಗಳು…

ಈ ಆರೋಗ್ಯ ವಿಮಾ ಯೋಜನೆಯು ಆಸ್ಪತ್ರೆಯ ದಾಖಲಾತಿ, ತಪಾಸಣೆ, ಶಸ್ತ್ರಚಿಕಿತ್ಸೆ ಸೇರಿದಂತೆ ಔಷಧ ವೆಚ್ಚಗಳು ಕೂಡ ಇದರಲ್ಲಿ ಒಳಗೊಂಡಿವೆ.ಈ ಆರೋಗ್ಯ ವಿಮಾ ಯೋಜನೆಯನ್ನು ರಾಜ್ಯಸರ್ಕಾರಗಳೇ ಜಾರಿ ಮಾಡಲಿದ್ದಾರೆ.

 

ಈ ಯೋಜನೆಗೆ ಯಾರೆಲ್ಲಾ ಅರ್ಹರು…