ಸುದ್ದಿ

ಮೋದಿ ‘ಭಾರತದ ಪಿತಾಮಹ’ಎಂದ ಟ್ರಂಪ್; ಗಾಂಧಿ ಮರಿಮೊಮ್ಮಗನ ಆಕ್ಷೇಪ…!

By admin

September 30, 2019

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತದ ಪಿತಾಮಹರೆನಿಸಬಹುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮಹಾತ್ಮಾ ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ, ಟ್ರಂಪ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಖಂಡಿಸಿದ್ದಾರೆ.

ಭಾರತದ ಪಿತಾಮಹಾ ನರೇಂದ್ರ ಮೋದಿ ಎಂದು ಹೇಳುವ ಟ್ರಂಪ್ ಅಮೆರಿಕಾ ಅಧ್ಯಕ್ಷ ಟ್ರಂಪ್ ಅಮೆರಿಕಾ ಪಿತಾಮಹಾರಲ್ಲೊಬ್ಬರಾದ ಜಾರ್ಜ್ ವಾಷಿಂಗ್ಟನ್ ಅವರ ಸ್ಥಾನದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಸಿದ್ದರಿದ್ದಾರೆಯೇ ಎಂದು ಗಾಂಧಿ ಮರಿಮೊಮ್ಮಗ ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾರೆ.

ಸರ್ಕಾರ ಈ ವರ್ಷ ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುತ್ತಿರುವುದು ಕೇವಲ ಸಾಂಕೇತಿಕವಷ್ಟೆ, ನಿಜವಾಗಿಯೂ ಮಹಾತ್ಮಾ ಗಾಂಧಿಯವರ ತತ್ವ, ಆದರ್ಶಗಳು, ಅವರು ಹಾಕಿಕೊಟ್ಟ ಮಾರ್ಗದರ್ಶನಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ಭಾರತದ ಪಿತಾಮಹಾ ಗಾಂಧೀಜಿಯವರ ಸ್ಥಾನಕ್ಕೆ ಬೇರೆಯವರನ್ನು ತಂದು ನಿಲ್ಲಿಸುವ ಅಗತ್ಯವಿದೆ ಎಂದು ಯಾರಾದರೂ ಬಯಸಿದ್ದರೆ ಅದಕ್ಕೆ ಸ್ವಾಗತ. ಹೀಗೆ ಹೇಳುತ್ತಿರುವ ಟ್ರಂಪ್ ಅವರು ಜಾರ್ಜ್ ವಾಷಿಂಗ್ಟನ್ ಸ್ಥಾನದಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.