ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮದೋರಾ ಗ್ರಾಮದ ಪಂಚಾಯಿತಿ ವಿವಾದಾತ್ಮಕ ತೀರ್ಮಾನ ಕೈಗೊಂಡಿದೆ. ಗ್ರಾಮದ ಹುಡುಗಿಯರು ಮೊಬೈಲ್ ನಲ್ಲಿ ಮಾತನಾಡುವುದು ಕಂಡು ಬಂದರೆ ಅವರಿಗೆ ೨೧ ಸಾವಿರ ರೂ. ದಂಡ ವಿಧಿಸಲಾಗುವುದೆಂದು ಎಚ್ಚರಿಸಿದೆ.
ಪಂಚಾಯಿತಿಯ ಈ ತೀರ್ಮಾನಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಅದನ್ನು ಸಮರ್ಥಿಸಿಕೊಂಡಿರುವ ಪಂಚಾಯಿತಿಯವರು, ಹುಡುಗಿಯರ ವಿರುದ್ದದ ಅಪರಾಧ ಪ್ರಕರಣಗಳಿಗೆ ತಡೆ ಹಾಕಲು ಹಾಗೂ ಪ್ರೇಮ ಪ್ರಕರಣಗಳ ಕಡಿವಾಣಕ್ಕೆ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಪಂಚಾಯಿತಿಯ ಈ ತೀರ್ಮಾನ ಜಿಲ್ಲಾಡಳಿತದ ಗಮನಕ್ಕೂ ಬಂದಿದ್ದು, ಅಧಿಕೃತವಾಗಿ ದೂರು ಬಂದರೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.