ಮೊಟ್ಟೆ ಪೌಸ್ಟಿಕವಾದ ಆಹಾರ.ನಾವು ಸಾಮಾನ್ಯವಾಗಿ ಮೊಟ್ಟೆ ಬೇಯಿಸಿದಾಗ ಅಥವಾ ಆಮ್ಲೆಟ್ ಮಾಡಲು ಹೋದಾಗ ಮೊಟ್ಟೆ ಹೊಡೆದು ಮೊಟ್ಟೆ ಚಿಪ್ಪನ್ನು ಬಿಸಾಡುತ್ತೇವೆ.
ಚಿಪ್ಪು ತಿನ್ನಲು ಯೋಗ್ಯವಲ್ಲ. ಆದರೆ ಚಿಪ್ಪಿನಿಂದ ಕೆಲವರು ಕಲಾಕೃತಿಗಳನ್ನು ತಯಾರಿಸುತ್ತಾರೆ. ಇನ್ನು ಕೆಲವರು ಮನೆಗೆ ಹಾವುಗಳು ಬರುವುದು ಬೇಡ ಎಂದು ಹೂವಿನ ಗಿಡಗಳಲ್ಲಿ ಮೊಟ್ಟೆ ಚಿಪ್ಪನ್ನುಇಟ್ಟಿರುತ್ತಾರೆ.
ಆದರೆ ಮೊಟ್ಟೆ ಚಿಪ್ಪಿನಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ನಿಮ್ಗೆ…ಮುಂದೆ ಓದಿ…
ಈ ಲೇಖನದಲ್ಲಿ ಮೊಟ್ಟೆ ಚಿಪ್ಪಿನಿಂದ ಚರ್ಮಕ್ಕೆ ಆಗುವ ಲಾಭಗಳ ಬಗ್ಗೆ ನಿಮಗೆ ತಿಳಿಸಿಕೊಡಲಾಗುವುದು. ಹೌದು, ಮೊಟ್ಟೆ ಚಿಪ್ಪಿನಲ್ಲಿ ಇರುವಂತಹ ನೈಸರ್ಗಿಕ ಆಮ್ಲವು ಚರ್ಮವನ್ನು ಸ್ವಚ್ಛಗೊಳಿಸಿ ಕಾಂತಿಯನ್ನು ನೀಡುವುದು. ಇದರಿಂದ ಮುಂದಿನ ಸಲ ನೀವು ಆಮ್ಲೆಟ್ ಮಾಡುವಾಗ ಮೊಟ್ಟೆಯ ಚಿಪ್ಪನ್ನು ಬಿಸಾಡಬೇಡಿ. ಅದನ್ನು ಬಳಸುವುದು ಹೇಗೆಂದು ತಿಳಿಯಲು ಓದುತ್ತಾ ಸಾಗಿ….
ಚರ್ಮದ ರಂಧ್ರಗಳಲ್ಲಿ ಸ್ವಚ್ಛಗೊಳಿಸುವುದು:-
ಮೊಟ್ಟೆಯ ಚಿಪ್ಪನ್ನು ಬಳಸುವುದರಿಂದ ಚರ್ಮದ ರಂಧ್ರಗಳು, ಚರ್ಮವು ಸ್ವಚ್ಛವಾಗುವುದು. ಇದರಿಂದ ಆರೋಗ್ಯಕರ ಹಾಗೂ ಸುಂದರ ಚರ್ಮವು ನಿಮ್ಮದಾಗುವುದು. ಮೊಟ್ಟೆಯ ಚಿಪ್ಪಿನ ಹುಡಿಯನ್ನು ಸ್ವಲ್ಪ ಲಿಂಬೆ ರಸ ಹಾಗೂ ಜೇನುತುಪ್ಪದೊಂದಿಗೆ ಬೆರೆಸಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ. ಇದು ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸಿ ಕಾಂತಿಯುತ ಚರ್ಮ ನೀಡುವುದು.
ಚರ್ಮ ಹೊಳೆಯುತ್ತೆ :-
ಮೊಟ್ಟೆಯ ಚಿಪ್ಪಿನಲ್ಲಿ ಇರುವಂತಹ ನೈಸರ್ಗಿಕ ಪ್ರೋಟೀನ್ ಮತ್ತು ವಿಟಮಿನ್‌ಗಳು ತ್ವಚೆಯನ್ನು ಯುವಕರಂತೆ ಹಾಗೂ ಹೊಳೆಯುವಂತೆ ಮಾಡುವುದು. ಎರಡು ಚಮಚ ಮೊಟ್ಟೆಯ ಚಿಪ್ಪಿನ ಹುಡಿಗೆ ಜೇನುತುಪ್ಪ ಮತ್ತು ಸ್ವಲ್ಪ ಕಡಲೆ ಹಿಟ್ಟು ಹಾಕಿ ಬೆರೆಸಿಕೊಳ್ಳಿ. ಈ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ವಾರದಲ್ಲಿ ಎರಡರಿಂದ ಮೂರು ಸಲ ಈ ಮಾಸ್ಕ್ ಅನ್ನು ಬಳಸಿದರೆ ಯುವ ಹಾಗೂ ಕಾಂತಿಯುತ ತ್ವಚೆಯು ನಿಮ್ಮದಾಗುವುದು.
ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುವುದು :-
ಮೊಟ್ಟೆಯ ಚಿಪ್ಪು ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸಿ ತ್ವಚೆಯನ್ನು ಆಳವಾಗಿ ಸ್ವಚ್ಛ ಮಾಡುವುದು. ಮೊಟ್ಟೆಯ ಚಿಪ್ಪಿನ ಮಾಸ್ಕ್‌ನಿಂದ ಚರ್ಮದ ರಂಧ್ರದಲ್ಲಿ ಸೇರಿರುವಂತಹ ಧೂಳು ಹಾಗೂ ಇತರ ಕಲ್ಮಶಗಳನ್ನು ದೂರ ಮಾಡಬಹುದು. ಇದರಿಂದ ರಂಧ್ರ ತುಂಬಿಕೊಳ್ಳುವುದು ತಪ್ಪುತ್ತದೆ. ಮೊಟ್ಟೆಯ ಚಿಪ್ಪು ಚರ್ಮಕ್ಕೆ ತುಂಬಾ ಲಾಭದಾಯಕ ಮತ್ತು ಮೊಡವೆಗಳು ಬರದಂತೆ ತಡೆಯುತ್ತದೆ.
ಚರ್ಮದ ಬಣ್ಣ ಹೆಚ್ಚಿಸುವುದು :-
ಮೊಟ್ಟೆಯ ಚಿಪ್ಪು ನೈಸರ್ಗಿಕವಾಗಿ ಚರ್ಮದ ಬಣ್ಣವನ್ನು ಹಗುರಗೊಳಿಸುವುದು ಮತ್ತು ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಚರ್ಮವು ಹೊಳೆಯುವಂತೆ ಮಾಡುವುದು. ಸ್ವಲ್ಪ ಮೊಟ್ಟೆಯ ಚಿಪ್ಪಿನ ಹುಡಿಗೆ ಲಿಂಬೆರಸ ಮತ್ತು ಇದ್ದಿಲಿನ ಹುಡಿಯನ್ನು ಹಾಕಿಕೊಳ್ಳಿ. ಚರ್ಮದ ಬಣ್ಣ ಹೆಚ್ಚಿಸುವುದು ಇನ್ನು ಇದನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು 30 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಮೊಟ್ಟೆಯ ಚಿಪ್ಪಿನಲ್ಲಿ ಇರುವಂತಹ ಬ್ಲೀಚಿಂಗ್ ಮತ್ತು ಬಣ್ಣವನ್ನು ಹಗುರಗೊಳಿಸುವ ಗುಣವು ಸುಂದರ ಹಾಗೂ ಯೌವನಯುತ ಚರ್ಮವನ್ನು ನಿಮ್ಮದಾಗಿಸುವುದು.
ಇಷ್ಟೆಲ್ಲಾ ಓದಿದ ಮೇಲೆ ಮೊಟ್ಟೆ ಚಿಪ್ಪನ್ನು ಬಿಸಾಡುತ್ತೀರೋ, ಏನು ಮಾಡುತ್ತೀರೋ ನೋಡಿ…