ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ವಿಶೇಷ ಘಟನೆಗೆ ಸಾಕ್ಷಿಯಾಗಿದೆ. ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ.
‘ಬಿಗ್ ಬಾಸ್’ನಲ್ಲಿ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ದಾಂಪತ್ಯ ಜೀವನಕ್ಕೆ ಕಾಲಿಡಲು ಮೈಸೂರು ದಸರಾ ವೇದಿಕೆಯಲ್ಲೇ ಮುನ್ನುಡಿ ಬರೆದಿದ್ದಾರೆ.
ಯುವ ದಸರಾದಲ್ಲಿ ನಿವೇದಿತಾ ಅವರಿಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಉಂಗುರ ತೊಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ರಂಗೇರಿದ್ದು ಕಾರ್ಯಕ್ರಮ ಮುಗಿಯುವ ವೇಳೆಯಲ್ಲಿ ಚಂದನ್ ಶೆಟ್ಟಿ ವೇದಿಕೆಯಲ್ಲಿಯೇ ಐ ಲವ್ ಯು ಹೇಳಿದ್ದಾರೆ. ನನ್ನನ್ನು ಮದುವೆಯಾಗುವೆಯಾ ಎಂದು ಕೇಳಿದ್ದು, ಇದಕ್ಕೆ ನಿವೇದಿತಾ ಒಪ್ಪಿಗೆ ಸೂಚಿಸುತ್ತಿದ್ದಂತೆ ರಿಂಗ್ ತೊಡಿಸಿದ್ದಾರೆ.
‘ಬಿಗ್ ಬಾಸ್’ನಿಂದ ಬಂದ ನಂತರ ಇಬ್ಬರ ನಡುವೆ ಗಾಸಿಪ್ ಇತ್ತು. ಈಗ ಓಪನ್ನಾಗಿ ಹೇಳಿಕೊಂಡಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇಬ್ಬರ ಮನೆಯವರೂ ಒಪ್ಪಿಕೊಂಡಿದ್ದು, ಕಾರ್ಯಕ್ರಮಕ್ಕೆ ಅವರೂ ಆಗಮಿಸಿದ್ದಾರೆ. ಮೈಸೂರಿನ ಹುಡಿಗುಯಾಗಿರುವ ನಿವೇದಿತಾ ಅವರನ್ನು ಮದುವೆಯಾಗಲಿದ್ದೇನೆ ಎಂದು ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಹೇಳಿದ್ದಾರೆ.