ಮೈಸೂರು ಮಹಾರಾಜ ಯದುವೀರ ಪತ್ನಿ, ರಾಣಿ ತ್ರಿಷಿಕಾರವರಿಗೆ ಜನಿಸಿದ ಪುಟ್ಟ ರಾಜಕುಮಾರನಿಗೆ ಈಗ ನಾಮಕರಣದ ಸಂಭ್ರಮ. ಹೌದು, ಮೈಸೂರಿನ ಪುಟ್ಟ ರಾಜಕುಮಾರನಿಗೆ ಬೆಂಗಳೂರಿನ ಅರಮನೆಯಲ್ಲಿ ನಾಮಕರಣ ಸಂಪ್ರದಾಯ ಬದ್ಧವಾಗಿ ನೆರವೇರಿದೆ.
ಈ ನಾಮಕರಣದ ಸಂಭ್ರಮಕ್ಕೆ, ತಮಗೆ ಬೇಕಾದ ಹತ್ತಿರದವರಿಗೆ ಮಾತ್ರ ಅಹ್ವಾನ ನಿಡಲಾಗಿತ್ತು. ಮಾಧ್ಯಮದವರಿಗೂ ಕೂಡ ಪ್ರವೇಶವಿರಲಿಲ್ಲ..ಈ ಹಿಂದೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನ್ಮದಿನದಂದು ಮೈಸೂರಿನ ಅರಮನೆಯಲ್ಲಿ ನಾಮಕರಣ ನಡೆಯಬೇಕಾಗಿತ್ತು ಆದರೆ ಕೆಲವು ಕಾರಣಾಂತರಗಳಿಂದ ಇಂದು ಬೆಂಗಳೂರಿನ ಅರಮನೆಯಲ್ಲಿ ನೆರವೇರಿದೆ..
ಮೈಸೂರಿನ ರಾಜಕುಮಾರನಿಗೆ ಇಟ್ಟ ಹೆಸರೇನು ಗೊತ್ತಾ..?
ಯದುವೀರ ಪತ್ನಿ, ರಾಣಿ ತ್ರಿಷಿಕಾರವರ, ಪುಟ್ಟ ರಾಜಕುಮಾರನಿಗೆ ರಾಜ ಮಾತೆ ಪ್ರಮೋದದೇವಿ ಯವರು “ಆಧ್ಯವೀರ್ ನರಸಿಂಹ ರಾಜ ಒಡೆಯರ್” ಎಂದು ನಾಮಕರಣ ಮಾಡಿದ್ದಾರೆ.ಕಾರ್ಯಕ್ರಮಕ್ಕೆ ಬಂದಿದ್ದಂತಹ ಎಲ್ಲರೂ ಆಧ್ಯವೀರ್ ಗೆ ಶುಭಕೋರಿದ್ದಾರೆ..
ರಾಜಕುಮಾರನ ನಾಮಕರಣದ ಈ ಶುಭ ಸಂಭ್ರಮದಲ್ಲಿ, ನೀವೂ ಸಹ ಈ ಪುಟ್ಟ ರಾಜಕುಮಾರನನ್ನು ಆರೈಸಿ, ಶುಭ ಕೋರಿ…