ರಾಜಕೀಯ

ಮುಖ್ಯಮಂತ್ರಿಗಳ ಪ್ರಕಾರ ಈ ಸಂಘಟನೆಗಳು ಮತ್ತು ಈ ಪಕ್ಷದ ನಾಯಕರೇ ಉಗ್ರಗಾಮಿಗಳಂತೆ..! ಹಾಗಾದ್ರೆ ನಿಜವಾದ ಉಗ್ರಗಾಮಿಗಳು ಯಾರು..?

By admin

January 10, 2018

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ  ಈ ಹೇಳಿಕೆ ಬರಬಾರದಿತ್ತು. ಅವರು ಚಾಮರಾಜನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡುತ್ತ, ಬಿಜೆಪಿಯವರನ್ನು ಟೀಕಿಸುವ ಭರದಲ್ಲಿ ಬಿಜೆಪಿ ಪಕ್ಷ  ಹಾಗೂ ಆರ್.ಎಸ್.ಎಸ್ ಮತ್ತು ಭಜರಂಗದಳ ಸಂಘಟನೆಗಳು “ಉಗ್ರಗಾಮಿಗಳು” ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ. ಜೊತೆಗೆ ತಾವು ಏನು ಕಡಿಮೆ ಇಲ್ಲ ಎನ್ನುವಂತೆ ದಿನೇಶ್ ಗುಂಡೂರಾವ್ ಅವರು ಬಿಜೆಪಿ ನಾಯಕರನ್ನು ‘ಜಿಹಾದಿಗಳು’ ಎಂದು ಕರೆದಿದ್ದಾರೆ.

ಸಾಮಾನ್ಯವಾಗಿ ಟೀಕೆಗಳನ್ನು ಎಲ್ಲಾ ರಾಜಕೀಯ ಪಕ್ಷಗಳು ಮಾಡುವುದು ಸಹಜ.ಆದ್ರೆ ಕೆಲವು ಹೇಳಿಕೆಗಳನ್ನು ಕೊಡಬೇಕಾದರೆ ಯೋಚಿಸಿ ಮಾತನಾಡಬೇಕಾಗುತ್ತದೆ.ಅದರಲ್ಲೂ ಒಂದು ರಾಜ್ಯದ ಮುಖ್ಯಮಂತ್ರಿ ಆಗಿರುವವರ ಕಡೆಯಿಂದ ಈ ತರನಾದ ಹೇಳಿಕೆಗಳು ಬರಬಾರದು.

ದೇಶದಲ್ಲಿ  ಆಡಳಿತದ ಚುಕ್ಕಾಣಿ ಇರುವುದು  ಬಿಜೆಪಿ ಕೈನಲ್ಲಿ, ಹಾಗೂ ದೇಶದ ಅನೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ.ಹಾಗಾಗಿ ಒಂದು ಪಕ್ಷವನ್ನು ಟೀಕಿಸುವ ನೆಪದಲ್ಲಿ ಉಗ್ರಗಾಮಿಗಳ ಪಟ್ಟ ಕಟ್ಟುವುದು ಎಷ್ಟು ಸರಿ ಮುಖ್ಯಮಂತ್ರಿಗಳೇ..?

ಹಾಗಾದ್ರೆ ನಿಜವಾದ ಉಗ್ರಗಾಮಿಗಳು ಯಾರು..?

ನಿಮ್ಮ ಪ್ರಖಾರ ಬಿಜೆಪಿ ನಾಯಕರು ಸೇರಿದಂತೆ, ಆರ್.ಎಸ್.ಎಸ್. ಮತ್ತು ಭಜರಂಗದಳದವರು ಉಗ್ರಗಾಮಿಗಳಾದ್ರೆ ನೀವೇಕೆ ಸುಮ್ಮನೆ ಇದ್ದೀರಾ…ಸುಮ್ಮನೆ ಹೇಳಿಕೆಗಳನ್ನು ಕೊಡುವುದರ ಬದಲು ಅಂತಹವರನ್ನು ಬಂದಿಸುಬಹುದಲ್ವ.

ಹಾಗಾದ್ರೆ ನಿಮ್ಮ ಪ್ರಕಾರ ಬಿಜೆಪಿಯವರು ಉಗ್ರಗಾಮಿಗಳಾದ್ರೆ ದೇಶದಲ್ಲಿ ಬಿಜೆಪಿ ಪಕ್ಷದಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಮತ್ತು ಬೇರೆ ರಾಜ್ಯಗಳಲ್ಲಿ ಅಡಳಿತ ನಡೆಸುತ್ತಿರುವ ಬಿಜೆಪಿ ನಾಯಕರು ಉಗ್ರಗಾಮಿಗಳಾ..?ನೀವೇ ಹೇಳಿ ಸ್ವಾಮೀ..

ನೀವು ಆರ್.ಎಸ್.ಎಸ್. ಮತ್ತು ಭಜರಂಗದಳದವರು ಉಗ್ರಗಾಮಿಗಳು ಎಂದು ಹೇಳಿದ್ದೀರಿ.

ಮಾಧ್ಯಮದವರು ಅಂತಹ ಸಂಘಟನೆಗಳನ್ನು ಬ್ಯಾನ್ ಮಾಡಿ ಅಂತ ಕೇಳಿದ್ರೆ ಯಾವುದೇ ಪ್ರೂಫ್ ಇಲ್ಲ ಅಂತ ಹೇಳ್ತೀರಾ. ಒಂದು ರಾಜ್ಯದ ಜವಾಬ್ದಾರಿ ವಹಿಸುವವರು ಈ ರೀತಿ ಹೇಳಿಕೆಗಳನ್ನು ಕೊಡುವುದು ಎಷ್ಟು ಸರಿ.