ಉಪಯುಕ್ತ ಮಾಹಿತಿ

ಮುಂದಿನ ತಿಂಗಳಿಂದ 500 ಕಿಮೀ. ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿ ಕಡಿತ..! ತಿಳಿಯಲು ಓದಿ…

By admin

October 21, 2017

ಮುಂದಿನ ತಿಂಗಳಿಂದ 500 ಕಿ.ಮೀ.ಗಿಂತ ಹೆಚ್ಚು ದೂರ ಸಂಚರಿಸುವ ರೈಲುಗಳ ಪ್ರಯಾಣದ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊಸ ವೇಳಾಪಟ್ಟಿಯನ್ನು ನವೆಂಬರ್ ತಿಂಗಳ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವುದಾಗಿ ಅವರು ಹೇಳಿದ್ದಾರೆ.

ರೈಲ್ವೆ ಸಚಿವ ಪಿಯೂಸ್ ಗೋಯಲ್ ಅವರ ನಿರ್ದೇಶನದಂತೆ ರೈಲುಗಳ ಪರಿಸ್ಕೃತ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಎಲ್ಲಾ ಜನಪ್ರಿಯ ರೈಲುಗಳ ಪ್ರಯಾಣದ ಅವಧಿಯನ್ನು ಕನಿಷ್ಠ 15 ನಿಮಿಷದಿಂದ ಎರಡು ಗಂಟೆಗಳವರೆಗೆ ಕಡಿತಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹೊಸ ವೇಳಾಪಟ್ಟಿಯಲ್ಲಿ ಪ್ರತಿ ರೈಲ್ವಿ ವಿಭಾಗಕ್ಕೂ ನಿರ್ವಹಣೆ ಕಾರ್ಯಗಳಿಗೆ ಎರಡರಿಂದ ನಾಲ್ಕು ಗಂಟೆಗಳ ಸಮಯ ನೀಡಲಾಗಿದೆ.

ಹೊಸ ವೇಳಾಪಟ್ಟಿಯಲ್ಲಿ ದೇಶಾದ್ಯಂತ ಸುಮಾರು 500 ರೈಲುಗಳ ಪ್ರಯಾಣದ ಅವಧಿ ಕಡಿತಗೊಳ್ಳುತ್ತಿದ್ದು, ಭೋಪಾಲ್-ಜೋಧ್ ಪುರ್ ಎಕ್ಸ್ ಪ್ರೆಸ್ ರೈಲು 95 ನಿಮಿಷ ಮುಂಚಿತವಾಗಿ ತಲುಪಲಿದೆ.

ಇನ್ನು 2,330 ಕಿ.ಮೀ.ಸಂಚರಿಸುವ ಗುವಾಹತಿ-ಇಂದೋರ್ ವಿಶೇಷ ರೈಲು 115 ನಿಮಿಷ ಮುಂಚಿತವಾಗಿ ತಲುಪಲಿದೆ.

ಹೀಗೆ ಭಾರತಿಯ ರೈಲುಗಳು ವೇಗವಾಗಿ ಓಡಲಿವೆ.