ಪ್ರಕೃತಿ ನಮಗೆ ನೀಡಿರುವ ಆರೋಗ್ಯಕರ ಆಹಾರಗಳಲ್ಲಿ ಮೀನು ಕೂಡ ಒಂದು, ಇನ್ನು ಮೀನು ಮಾಂಸದ ಆಹಾರದ ಪ್ರೀತಿಯರಿಗೆ ತುಂಬಾ ಪ್ರಿಯವಾದ ಆಹಾರ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಮೀನನ್ನ ಪ್ರಪಂಚದಲ್ಲಿ ಹೆಚ್ಚಿನ ಜನರು ತಿನ್ನುತ್ತಾರೆ. ಇನ್ನು ಕರಾವಳಿ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಮೀನು ಅಂದರೆ ಪಂಚಪ್ರಾಣ, ಮೀನು ತುಂಬಾ ಆರೋಗ್ಯಕರವಾದ ಆಹಾರ ಅನ್ನುವುದು ನಮಗೆ ತಿಳಿದಿರುವ ವಿಚಾರ ಆಗಿದೆ ಮತ್ತು ಅದನ್ನ ವೈದ್ಯಲೋಕ ದೃಡಪಸಿಡಿದೆ, ಮೀನಿನಲ್ಲಿ ಇರುವ ಹಲವು ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ತುಂಬಾ ಆರೋಗ್ಯಕವಾಗಿದೆ. ಮೀನಿನಲ್ಲಿ ಪ್ರೊಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪಾಸ್ಪರಸ್ ಅಂಶಗಳು ಬಹಳ ಹೆಚ್ಚಾಗಿ ಇರುತ್ತದೆ, ಮೀನಿನಲ್ಲಿ ಕಬ್ಬಿಣ, ಮೆಗ್ನೇಷಿಯಂ, ಪೊಟ್ಯಾಸಿಯಂ ನಂತಹ ಖನಿಜಾಂಶಗಳು ಕೂಡ ಇದೆ.
ಇನ್ನು ಇದರಲ್ಲಿ ಇರುವ ಕೆಲವು ಅಂಶಗಳು ನಮ್ಮ ದೇಹದ ಸೊಂಟದ ಸುತ್ತಲಿನ ಕೊಬ್ಬನ್ನ ಕರಗಿಸುವುದು ಮಾತ್ರವಲ್ಲದೆ ಇತರೆ ಹಲವು ರೀತಿಯ ಆರೋಗ್ಯಕರ ಅಂಶಗಳು ನಮ್ಮ ದೇಹಕ್ಕೆ ಸಿಗುತ್ತದೆ. ಹಾಗಾದರೆ ಮೀನನ್ನ ಹೆಚ್ಚಾಗಿ ತಿನ್ನುವುದರಿಂದ ನಮ್ಮ ದೇಹಕ್ಕೆ ಆಗುವ ಲಾಭಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ನಾವು ಮೀನನ್ನ ಹೆಚ್ಚಾಗಿ ತಿನ್ನುವುದರಿಂದ ನಮ್ಮ ಮೆದುಳು ಮತ್ತು ಯಕೃತ್ ಗಳು ಸರಿಯಾದ ರೀತಿಯಲ್ಲಿ ಕಾರ್ಯವಹಿಸುತ್ತದೆ ಮತ್ತು ಇವುಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಲ್ಲಿ ಮೀನು ಪ್ರಮುಖ ಪಾತ್ರವನ್ನ ವಹಿಸಿದೆ.
ಇನ್ನು ನಿದ್ರೆಯ ಸಮಸ್ಯೆಯನ್ನ ಎದುರಿಸುತ್ತಿರುವವರು ಹೆಚ್ಚಾಗಿ ಮೀನು ತಿನ್ನುವುದರಿಂದ ಅವರ ನಿದ್ರೆಯ ಸಮಸ್ಯೆ ಕೂಡ ದೂಡ ಆಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ ಮತ್ತು ಹೃದಯ ಸಂಬಂಧಿ ಖಾಯಿಲೆಗಳನ್ನ ತಡೆಗಟ್ಟುವಲ್ಲಿ ಮೀನಿನ ಮಾಂಶ ಪ್ರಮುಖ ಪಾತ್ರವನ್ನ ವಹಿಸುತ್ತದೆ. ಹೌದು ಒಮೇಗಾ 3 ಕೊಬ್ಬಿನ ಅಂಶವು ಮೀನಿನಲ್ಲಿ ಹೆಚ್ಚಾಗಿ ಇರುವುದರಿಂದ ಇದು ಹೃದಯ ಸಂಬಂದಿ ಖಾಯಿಲೆಗಳನ್ನ ಕಡಿಮೆ ಮಾಡುತ್ತದೆ, ಇನ್ನು ತಿನ್ನುವುದರಿಂದ ಅಲ್ಪೇಮಾರ್ ಖಾಯಿಲೆಯನ್ನ ತಡೆಗಟ್ಟಬಹುದಾಗಿದೆ. ಮೀನನ್ನ ತಿನ್ನುವುದರಿಂದ ಮೆದುಳಿನ ಕುಗ್ಗುವಿಕೆ ಮತ್ತು ಕ್ಷೀಣಿಸುವಿಕೆಯನ್ನ ಕಡಿಮೆ ಮಾಡಬಹುದಾಗಿದೆ ಮತ್ತು ಇದರಿಂದ ಮೆದುಳಿಗೆ ಸಮಸ್ಯೆಗಳು ಸಂಪೂರ್ಣವಾಗಿ ದೂರ ಆಗುತ್ತದೆ.
ಮಾನಸಿಕ ಖಿನ್ನತೆಯನ್ನ ಅನುಭವಿಸುತ್ತಿರುವವರು ಮೀನನ್ನ ಹೆಚ್ಚಾಗಿ ತಿನ್ನುವುದರಿಂದ ಅವರ ಖಿನ್ನತೆಯನ್ನ ಕಡಿಮೆ ಮಾಡಿಕೋಳ್ಳಬಹುದಾಗಿದೆ ಮತ್ತು ನಮ್ಮ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಮೀನು ಮತ್ತು ಮೀನಿನ ಎಣ್ಣೆಯೂ ಖಿನ್ನತೆಯನ್ನ ದೂರ ಮಾಡುವಲ್ಲಿ ಪ್ರಮುಖ ಪಾತ್ರವನ್ನ ವಹಿಸಿದೆ. ಮೂಳೆಗಳ ಗಡಿಸುವಿಕೆಗೆ ಮತ್ತು ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಡಿ ತುಂಬಾ ಅವಶ್ಯಕ, ಇನ್ನು ಮೀನಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಡಿ ಇರುವುದರಿಂದ ಮೂಳೆಗಳ ಆರೋಗ್ಯವನ್ನ ಕಾಪಾಡಿಕೊಳ್ಳುವಲ್ಲಿ ಮೀನು ತುಂಬಾ ಸಹಕಾರಿಯಾಗಿದೆ, ಇದಕ್ಕೆ ಕರಾವಳಿ ಪ್ರದೇಶದವರ ಮೂಲೆಗೆಳು ತುಂಬಾ ಗಟ್ಟಿ. ಇನ್ನು ಮೀನಿನಲ್ಲಿ ಇರುವ ಒಮೇಗಾ 3 ಕೊಬ್ಬಿನ ಅಂಶವು ಕಣ್ಣಿನ ದೃಷ್ಟಿ ಮತ್ತು ಆರೋಗ್ಯವನ್ನ ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ.
ಇನ್ನು ಸಂಧಿವಾತದಿಂದ ಬಳಲುತ್ತಿರುವವರು ಹೆಚ್ಚಾಗಿ ಮೀನು ಸೇವನೆ ಮಾಡಿದರೆ ಈ ಸಮಸ್ಯೆ ಆದಷ್ಟು ಬೇಗ ನಿವಾರಣೆ ಆಗುತ್ತದೆ, ಮೀನು ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ. ಇನ್ನು ಮಧುಮೇಹದ ನಿಯಂತ್ರಣಕ್ಕೆ ಮೀನು ಉತ್ತಮವಾದ ಔಷಧಿಯಾಗಿದೆ, ಹೌದು ಕೆಲವು ಸಂಶೋಧನೆಯ ಪ್ರಕಾರ ಮೀನು ತಿನ್ನುವುದರಿಂದ ಮಧುಮೇಹದ ಖಾಯಿಲೆಯನ್ನ ಕಡಿಮೆ ಮಾಡಿಕೋಳ್ಳಬಹುದಾಗಿದೆ ಮತ್ತು ಗ್ಲುಕೋಸ್ ಚಯಾಪಚಯ ಕ್ರಿಯೆಗೆ ಮೀನು ತುಂಬಾ ಸಹಕಾರಿ, ಮಹಿಳೆಯರಲ್ಲಿ ವೃತುಚಕ್ರದ ಮೊದಲು ಕಾಣಿಸಿಕೊಳ್ಳುವ ಕೆಲವು ಸಮಸ್ಯೆಯನ್ನ ನಿವಾರಣೆ ಮಾಡುವಲ್ಲಿ ಮೀನು ಪ್ರಮುಖ ಪಾತ್ರವನ್ನ ವಹಿಸಿದೆ, ಸ್ನೇಹಿತರೆ ಮೀನು ಹೆಚ್ಚಾಗಿ ತಿನ್ನುವುದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ, ಸ್ನೇಹಿತರೆ ಮೀನಿನ ಬಗೆಗಿನ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.