ಉಪಯುಕ್ತ ಮಾಹಿತಿ

ಮಿಲಿಯನ್ ಬಳಕೆದಾರರಿಗೆ ಜಿಯೋ ಕ್ರಿಸ್‌ಮಸ್’ಗೆ ನೀಡುತ್ತಿದೆ ಹೊಸ ಸೇವೆ.! ತಿಳಿಯಲು ಈ ಲೇಖನ ಓದಿ…

By admin

December 20, 2017

ರಿಲಾಯನ್ಸ್ ಮಾಲೀಕತ್ವದ ಜಿಯೋ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಕೇವಲ ಡೇಟಾ-ಉಚಿತ ಕರೆಗಳ ಸೇವೆಯನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲಿಲ್ಲ. ಇದರ ಬದಲಿಗೆ ಹೊಸ ಮಾದರಿಯ ಆಪ್‌ ಸೇವೆಗಳನ್ನು ನೀಡುವ ಮೂಲಕ ಹೊಸ ಹಾದಿಯನ್ನು ಟೆಲಿಕಾಂ ಕಂಪನಿಗಳಿಗೆ ತೋರಿಸಿಕೊಟ್ಟಿತ್ತು.

ಜಿಯೋ ಸಿನಿಮಾ ವೆಬ್ ವರ್ಜನ್ ಶುರುಮಾಡಿದೆ. ಈ ಮೂಲಕ ಇನ್ಮುಂದೆ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ನಲ್ಲಿ ಆನ್ಲೈನ್ ನ ಮೂಲಕ ಟಿವಿ ನೋಡಬಹುದಾಗಿದೆ. ಈವರೆಗೆ ಜಿಯೋ ಟಿವಿ ಕೇವಲ ಮೊಬೈಲ್ ಆ್ಯಪ್ ನಲ್ಲಿ ಮಾತ್ರ ಲಭ್ಯವಿತ್ತು. ಜಿಯೋ ಬಳಕೆದಾರರು ಅನೇಕ ದಿನಗಳಿಂದ ಈ ಬೇಡಿಕೆಯನ್ನು ಮುಂದಿಟ್ಟಿದ್ದರು. ಇದಕ್ಕೆ ಜಿಯೋ ಮನ್ನಣೆ ನೀಡಿದೆ.

ಜಿಯೋ ಟಿವಿ ಆ್ಯಪ್ ನಲ್ಲಿ ಏನಲ್ಲ ಲಭ್ಯವಿದೆಯೋ ಅದೆಲ್ಲ ಇನ್ಮುಂದೆ ಟಿವಿ ವೆಬ್ ವರ್ಜನ್ ನಲ್ಲಿಯೂ ಸಿಗಲಿದೆ. ಜಿಯೋ ಗ್ರಾಹಕರಿಗೆ ಎಸ್ಡಿ ಹಾಗೂ ಎಚ್ಡಿ ಚಾನೆಲ್ ಆಯ್ಕೆ ಕೂಡ ಸಿಗ್ತಿದೆ.

ಆಪ್‌ನಿಂದ ವೆಬ್‌ ಸೇವೆ:-

ಇದೇ ಕೆಲವು ದಿನಗಳ ಹಿಂದೆ ಜಿಯೋ ಸಿನಿಮಾ ಆಪ್‌ ಸೇವೆಯನ್ನು ವೆಬ್‌ನಲ್ಲಿಯೂ ನೋಡುವ ಅವಕಾಶವನ್ನು ತನ್ನ ಬಳಕೆದಾರರಿಗೆ ಮಾಡಿಟ್ಟಿದ್ದ ಜಿಯೋ, ಈ ಮೂಲಕ ತನ್ನ ಬಳಕೆದಾರರಿಗೆ ಹೊಸ ಅನುಭವನ್ನು ನೀಡಲು ಮುಂದಾಗಿತ್ತು. ಇದು ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿತ್ತು. ಈಗ ಜಿಯೋ ಟಿವಿ ಸೇವೆ:

ಜಿಯೋ ಸಿನಿಮಾ ವೆಬ್‌ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡ ಹಿನ್ನಲೆಯಲ್ಲಿ ಜಿಯೋ ತನ್ನ ಲೈವ್‌ ಟಿವಿ ಆಪ್‌ ಸೇವೆಯನ್ನು ವೆಬ್‌ಗೆ ವಿಸ್ತರಿಸಿದ್ದು, ಈ ಮೂಲಕ ಮಿಲಿಯನ್ ಜಿಯೋ ಟಿವಿಯನ್ನು ವೆಬ್ ವರ್ಜಿನ್ ನಲ್ಲಿ ನೋಡಲು ನೀವು ಜಿಯೋ ಅಕೌಂಟ್ ಲಾಗಿನ್ ಆಗಬೇಕು. ಯಾವ ಗ್ರಾಹಕರ ಬಳಿ ಜಿಯೋ 4ಜಿ ಸಿಮ್ ಇದೆಯೋ ಅವರು ಇದರ ಲಾಭಪಡೆಯಬಹುದಾಗಿದೆ.

ಜಿಯೋ ವೆಬ್ ವರ್ಜನ್ ನಲ್ಲಿ ಕೂಡ 7 ದಿನಗಳ ಹಿಂದಿನ ವಿಷ್ಯಗಳನ್ನು ನೋಡಬಹುದಾಗಿದೆ. ನೆಚ್ಚಿನ ಕಾರ್ಯಕ್ರಮ ಮಿಸ್ ಆಗಿದ್ದಲ್ಲಿ. 7 ದಿನಗಳ ಒಳಗೆ ಜಿಯೋ ವೆಬ್ ವರ್ಜನ್ ನಲ್ಲಿಯೂ ಆ ಕಾರ್ಯಕ್ರಮ ನಿಮಗೆ ಸಿಗಲಿದೆ.

HD ಸೇವೆ:-

ಇದಲ್ಲದೇ ಜಿಯೋ ಲೈವ್‌ ಟಿವಿಯನ್ನು ಗ್ರಾಹಕರು ವೆಬ್‌ ಆವೃತ್ತಿಯಲ್ಲಿ HD ಗುಣಮಟ್ಟದಲ್ಲಿ ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದರಿಂದಾಗಿ ಗ್ರಾಹಕರು ತಮ್ಮ ಸ್ಮಾರ್ಟ್‌ ಟಿವಿಯಲ್ಲಿಯೂ ಈ ಸೇವೆಯನ್ನು ಪಡೆಯಬಹುದಾಗಿದೆ.