ಇದು ಕಾಡಿನಲ್ಲಿ ಮುರಿದು ಬಿದ್ದಿದ್ದ, ಮರದ ಟೊಂಗೆಯೊಂದರಲ್ಲಿದ್ದ,ಹೆಣ್ಣು ಪೈಥಾನ್ (ಹೆಬ್ಬಾವು)ನ್ನು, ಗ್ರಾಮಸ್ತರು ಹಿಡಿದು ಫ್ರೈ ಮಾಡಿ, ಊರಿಗೆಲ್ಲಾ ಹಂಚಿ ತಿಂದಿರುವ ಘಟನೆಯೊಂದು ನಡೆದಿದೆ.
ಇದು ಮಲೇಷ್ಯಾದ ಬೋರ್ನಿಯೋ ದ್ವೀಪದಲ್ಲಿ ಶನಿವಾರ ಮಧ್ಯಾನ್ಹ ನಡೆದಿದ್ದು, ಸ್ಥಳೀಯ ಹಳ್ಳಿಗರು ಬೇಟೆಗೆಂದು ತೆರಳಿದ್ದಾಗ, ಕಾಡಿನಲ್ಲಿ ಬಿದ್ದ ಮರವೊಂದರ ಶಬ್ದವನ್ನು ಕೇಳಿ, ಹೋಗಿ ನೋಡಿದಾಗ ಅಲ್ಲಿ ಬೃಹತ್ತಾದ ಮರದ ಟೊಂಗೆಯೆಂದು ಬಿದ್ದಿತ್ತು.
ಅವರು ಮರದ ಟೊಂಗೆಯನ್ನು ಕಟ್ ಮಾಡಿ ನೋಡಿದಾಗ, ಅದರಲ್ಲಿದ ಹೆಬ್ಬಾವುಗಳನ್ನು ಕಂಡು ಶಾಕ್ ಆಗಿದ್ದಾರೆ.ಇದರಲ್ಲಿ 20ಅಡಿ ಉದ್ದಾದ ಹೆಣ್ಣು ಹೆಬ್ಬಾವು, ಬೇರೆ ಇನ್ನೊಂದು ಹೆಬ್ಬಾವಿನೊಂದಿಗೆ ಸಂಯೋಗದಲ್ಲಿತ್ತು.ನಂತರ ಆ ಹೆಬ್ಬಾವುಗಳನ್ನು ಹೊರಗೆಳೆದು ಶೂಟ್ ಮಾಡಿ ಕೊಂದಿದ್ದಾರೆ.ಕೊಂದ ಹೆಬ್ಬಾವುಗಳನ್ನು ತಮ್ಮ ಟ್ರಕ್’ನಲ್ಲಿ ಹಾಕಿಕೊಂಡು ಊರಿಗೆ ಬಂದು,ಈಡೀ ಊರೆಲ್ಲಾ ಮೆರವಣಿಗೆ ಮಾಡಿದ್ದಾರೆ.
ಸ್ತಳೀಯ 60 ವರ್ಷದ ಟಿನ್ಸುಂಗ್ ಉಜಾಂಗ್, ಕೆಲಾವಿತ್ ನದಿಯ ಬಳಿ ಬಿನ್ಟುಲು ಪಟ್ಟಣದಲ್ಲಿರುವ ಗ್ರಾಮಸ್ಥರು, ಇನ್ನು ಕೆಲವು ದಿನಗಳು ಈ ಮಾಂಸದಿಂದ ಹಬ್ಬವನ್ನು ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ನಾನು ತುಂಬಾ ಶಾಕ್ ಆಗಿದ್ದೇನೆ.!ಏಕೆಂದರೆ ಇದಕ್ಕೆ ಮೊದಲು ನಾನು ಹಾವುಗಳು ಸಂಯೋಗದಲ್ಲಿರುವುದನ್ನು ನೋಡಿರಲಿಲ್ಲ.ಹಾಗೂ ನಾನು ಇದುವರೆಗೂ 5 ಅಡಿ ಉದ್ದದ ಹಾವುಗಳನ್ನು ಮಾತ್ರ ನೋಡಿದ್ದೇ,ಆದ್ರೆ ಈ 20 ಅಡಿ ಉದ್ದದ ಹೆಬ್ಬಾವನ್ನು ನೋಡಿದ್ದು ಇದೇ ಮೊದಲು.
ಈ ಹಾವನ್ನು ಊರಿಗೆ ತಂದ ಬಳಿಕ ಗ್ರಾಮಸ್ತರು, ಅರ್ಧ ಮಾಂಸವನ್ನು ಫ್ರೈ ಮಾಡಿ, ಉಳಿದ ಮಾಂಸವನ್ನು ಅನ್ನ ತರಕಾರಿಗಳ ಜೊತೆಗೆ ತಿಂದಿದ್ದಾರೆ. ಟಿನ್ಸುಂಗ್ ಉಜಾಂಗ್ ಹೇಳುವ ಪ್ರಕಾರ ಈ ಮಾಂಸವನ್ನು ಊರಿನ ಎಲ್ಲಾ ಜನರಿಗೆ ಸಮನಾಗಿ ಹಂಚುವದಲ್ಲದೆ,ಪಕ್ಕದಲ್ಲಿ ಕೆಲಸ ಮಾಡುವ ಸ್ಥಳೀಯ ಕಾರ್ಮಿಕರಿಗೆ ಕೂಡ ಹಂಚಲಾಗಿದೆ ಎಂದು ಹೇಳಿದ್ದಾರೆ.