ದೇವರು-ಧರ್ಮ

ಮಾವಿನ ತೋರಣ ಬಾಗಿಲಿಗೆ ಕಟ್ಟುವುದರ ಉದ್ದೇಶ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

By admin

February 23, 2018

ಹಿಂದುಗಳಿಗೆ ಅಮಾವಾಸ್ಯೆ ಹುಣ್ಣಿಮೆಯಿಂದ ಹಿಡಿದು ಪ್ರತಿದಿನವೂ ಒಂದು ರೀತಿಯ ಹಬ್ಬವೇ ಸರಿ. ವರ್ಷದಲ್ಲಿ ಹೆಚ್ಚಿನ ಹಬ್ಬಗಳನ್ನ ಆಚರಿಸುವವರು ಕೂಡ ಇವರೇ, ಪ್ರತಿ ಹಬ್ಬಗಳು ಸಹ ಒಂದೊಂದು ವಿಶೇಷತೆಯನ್ನ ಹೊಂದಿವೆ ಎಂದರೆ ಖಂಡಿತ ತಪ್ಪಾಗಲಾರದು.ಹಿಂದೂಗಳು ಹೆಚ್ಚಾಗಿ ಸಂಪ್ರದಾಯಗಳನ್ನ ಇನ್ನು ಸಹ ಆಚರಣೆಯಲ್ಲಿಟ್ಟಿದ್ದರೆ, ಒಂದೊಂದು ಆಚರಣೆಗಳಿಗೂ ಸಹ ಒಂದೊಂದು ಮಹತ್ವವಿದೆ.

 

ಮಾವು ನಿದ್ರಾಹೀನತೆಯನ್ನು ದೂರ ಮಾಡುತ್ತದೆ. ಹಬ್ಬದ ಸಂದರ್ಭದಲ್ಲಿ ಕೆಲಸದ ಒತ್ತಡವನ್ನು, ಶ್ರಮವನ್ನು ಹೋಗಲಾಡಿಸುವುದು ಮಾವಿನ ತೋರಣ. ಮಾವು ಬಯಕೆಗಳನ್ನು ತೀರಿಸುತ್ತದೆ ಎಂದು ಭಾವಿಸುತ್ತಾರೆ.

 

ಪರ್ವದಿನಗಳಲ್ಲಿ, ಯಜ್ಞಯಾಗಗಳಲ್ಲಿ ಧ್ವಜಾರೋಹಣ ಮಾಡುವುದು ಅನಾದಿಯಾಗಿ ಬರುತ್ತಿರುವ ಸಂಪ್ರದಾಯ. ಇದನ್ನು ಅನುಸರಿಸಿ ತೋರಣಗಳನ್ನು ಕಟ್ಟುವ ಆಚಾರ ಬಂದಿದೆ.

ಹಬ್ಬ ಹರಿದಿನಗಳಲ್ಲಿ ಹೂವು, ಹಣ್ಣು, ಕಾಯಿ. ವಿಲ್ಯೆದೆಲೆ, ಬಾಳೆಎಲೆ, ಇವುಗಳೊಂದಿಗೆ ಬಾಗಿಲಿಗೆ ವಿಶೇಷವಾಗಿ ತೋರಣಗಳನ್ನ ಸಹ ಕಟ್ಟುತ್ತಾರೆ. ಅಶ್ವತ್ಥ, ಅತ್ತಿ, ಕಿರ್ಗೋಳಿ, ಮಾವು, ಹಲಸು ಎಲೆಗಳನ್ನು ಪಂಚಪಲ್ಲವಗಳು ಎಂದು ಕರೆಯುತ್ತಾರೆ. ಶುಭಕಾರ್ಯಗಳಲ್ಲಿ ಇವನ್ನು ಯತೇಚ್ಛವಾಗಿ ಬಳಸುತ್ತಾರೆ. ತೋರಣಕ್ಕಾಗಿ ಮಾತ್ರ ಮಾವಿನ ಎಲೆಗಳನ್ನು ಬಳಸುತ್ತಾರೆ.