ಸುದ್ದಿ

ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು ಹೀಗೆ ಮಾಡಿ..!

By admin

August 12, 2019

ತಲೆ ನೋವು ಕಾಣಿಸಿಕೊಳ್ಳಲು ಕಾರಣ ಒಂದಾ ಅಥವಾ ಎರಡ ಅನೇಕ ಕಾರಣಗಳಿವೆ. ಅದರಲ್ಲಿಯೂ ಅಧಿಕ ಒತ್ತಡ ಉಂಟಾದಾಗ ಹೆಚ್ಚಾಗಿ ತಲೆನೋವು ಕಾಣಿಸಿಕೊಳ್ಳುತ್ತಾದೆ ಇಂತಹ ಸಂದರ್ಭದಲ್ಲಿ ಮಾತ್ರೆ ಬಳಸದೆ ಮುಕ್ತಿ ಪಡೆಯಬಹುದು.

ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು 10 ಸುಲಭ ಪರಿಹಾರಗಳು

1) ನಿದ್ದೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ತಲೆಗೆ ಲೇಪನ ಮಾಡಿಕೊಳ್ಳಬೇಕು ನಂತರ ನಿದ್ದೆ ಮಾಡಿ, ತಲೆನೋವು ಸರಿ ಹೋಗುತ್ತಾದೆ.

2) ಜಾಯಿಕಾಯಿಯ ಪುಡಿಯನ್ನು ತಣ್ಣಗಿನ ನೀರಲ್ಲಿ ಕಲಸಿ ಅದನ್ನು ದಿನದಲ್ಲಿ ಮೂರು ಭಾರೀ ಕುಡಿಯುವುದರಿಂದ ತಲೆನೋವು ಕಡಿಮೆ ಮಾಡಬಹುದು.

3). ಕೊಬ್ಬರಿ ಎಣ್ಣೆಗೆ ಲವಂಗದ ಎಣ್ಣೆ ಮಿಕ್ಸ್ ಮಾಡಿ ಹಣೆಗೆ ಮಸಾಜ್‌ ಮಾಡಿ ರಿಲ್ಯಾಕ್ಸ್ ಆಗಿ ಇದರಿಂದ ತಲೆನೋವು ಸುಲಭವಾಗಿ ಕಡಿಮೆಯಾಗುತ್ತಾದೆ.

4) ತುಳಸಿ ಎಲೆಯ ರಸವನ್ನು ಶ್ರೀಗಂಧದ ಪುಡಿ ಜತೆ ಕಲಸಿ ಹಣೆಯ ಮೇಲಿನ ಭಾಗಕ್ಕೆ ಹಚ್ಚಿಕೊಂಡು 1 ಗಂಟೆ ಬಿಡಬೇಕು ನಂತರ ಮುಖವನ್ನು ತೊಳೆಯುವುದರಿಂದ ತಲೆನೋವು ಮಂಗಮಾಯವಾಗುತ್ತಾದೆ.

5) ಶುಂಠಿ ಟೀ  ಸೇವನೆ ಮಾಡುವುದರಿಂದ ತಲೆನೋವು ಕಡಿಮೆಯಾಗುತ್ತಾದೆ.

6) ಸಾಮಾನ್ಯವಾಗಿ ಬಾಳೆಹಣ್ಣು ತಿಂದು ನೀರು ಕುಡಿದರೆ ತಲೆನೋವು ಮಂಗಮಾಯವಾಗುತ್ತದೆ. ಆದರೆ ಈ ಟ್ರಿಕ್ ಎಲ್ಲ ಸಂದರ್ಭಗಳಲ್ಲೂ ಕೆಲಸಕ್ಕೆ ಬರೋಲ್ಲ ಕೆಲವರಿಗೆ ಮಾತ್ರ ಸರಿ ಹೊಂದುತ್ತದೆ.

7)  ಬೆಳ್ಳುಳ್ಳಿ ಸೇವನೆ ಹೆಚ್ಚು ಮಾಡುವುದರಿಂದ ತಲೆನೋವು ಕಡಿಮೆಯಾಗುತ್ತಾದೆ.

8) ಬ್ಲಾಕ್​ ಟೀ ಯಲ್ಲಿ ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ತಲೆನೋವಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬಹುದು

9) ನೀವು ತಲೆನೋವಿನಿಂದ ಬಳಲುತ್ತಿದ್ದರೆ ಲವಂಗ ಮತ್ತು ಉಪ್ಪನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ತಲೆನೋವಿಗೆ ಪರಿಹಾರ ಕಾಣಬಹುದು.

10) ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ತಲೆನೋವಿಗೆ ಶುಂಠಿ ಕಾಫಿ ಅತ್ಯುತ್ತಮ ಮನೆಮದ್ದು. ಅದೇ ರೀತಿ ಇತರೆ ಸಮಯದಲ್ಲಿ ಉಂಟಾಗುವ ತಲೆನೋವಿಗೆ ಪರಿಹಾರವಾಗಿ ಶುಂಠಿ ಪೇಸ್ಟ್​ ಅನ್ನು ಬಳಸಿಕೊಳ್ಳಬಹುದು. ಶುಂಠಿಯನ್ನು ಅರೆದು, ಅದನ್ನು ಸ್ವಲ್ಪ ನೀರಿನೊಂದಿಗೆ ಹಣೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ತಲೆನೋವು ಎಂಬುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಆಧುನಿಕ ಜೀವನ ಶೈಲಿ, ಕೆಲಸದ ಒತ್ತಡ ಮುಂತಾದ ಕಾರಣಗಳಿಂದ ತಲೆನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯ ತಲೆನೋವಿಗೆ ಪ್ರತಿನಿತ್ಯ ನಾವು ಬಳಸುವ ಅಡುಗೆ ಪದಾರ್ಥಗಳನ್ನು ಬಳಸಿ ಮೇಲಿನವುಗಳನ್ನು ಉಪಯೋಗಿಸಿಕೊಂಡು ಪರಿಹಾರ ಪಡೆಯಬಹುದು.