ಮಹಿಳೆಯೊಬ್ಬಳು ಐರ್ಲೆಂಡ್ ನಲ್ಲಿ ದೆವ್ವವನ್ನೇ ಮದುವೆಯಾಗಿದ್ದಾಳೆ. ಅಮಂಡಾ ಟೀಗ್ ಎಂಬ ಮಹಿಳೆ ಸರ್ವಾಲಂಕೃತಳಾಗಿ ಚರ್ಚ್ ಗೆ ಬಂದಿದ್ಲು. ಅಲ್ಲಿ ಅತಿಥಿಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿ 300 ವರ್ಷ ವಯಸ್ಸಿನ ಜಾಕ್ ಎಂಬ ದೆವ್ವವನ್ನು ಮದುವೆಯಾಗಿದ್ದಾಳೆ.
ಮನುಷ್ಯರು ಮತ್ತು ಆತ್ಮಗಳ ನಡುವಣ ಸಂಬಂಧದ ಬಗ್ಗೆ ಮೊದಲೆಲ್ಲೂ ಕೇಳಿರಲಿಲ್ಲ ಎನ್ನುತ್ತಾಳೆ ಅಮಂಡಾ. ಹಾಗಾಗಿ ಈ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ಲಂತೆ. ಆಗ ತನ್ನ ಹಾಗೂ ಆ ದೆವ್ವದ ನಡುವಣ ಪ್ರೀತಿ ಎಷ್ಟು ಸತ್ಯ ಅನ್ನೋದು ಅರಿವಾಯ್ತು ಅಂತಾ ಹೇಳಿದ್ದಾಳೆ.
ಜ್ಯಾಕ್ ಒಬ್ಬ ಕಡಲುಗಳ್ಳ, 1700ರಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ. ಈಗ ದೆವ್ವವಾಗಿರುವ ಜಾಕ್ 45 ವರ್ಷದ ಅಮಂಡಾಳನ್ನು ಪ್ರೀತಿಸ್ತಾನಂತೆ. ಅಮಂಡಾಗೆ ಕೂಡ ಆ ದೆವ್ವ ಅಂದ್ರೆ ಪಂಚಪ್ರಾಣ. ಸ್ನೇಹದಿಂದ ಶುರುವಾದ ಅವರ ಸಂಬಂಧ ಈಗ ಮದುವೆಯಲ್ಲಿ ಪರ್ಯಾವಸಾನವಾಗಿದೆ.
ದೆವ್ವದ ಜೊತೆ ಲೈಂಗಿಕ ಸಂಬಂಧವನ್ನು ಕೂಡ ಅಮಂಡಾ ಹೊಂದಿದ್ದಾಳಂತೆ. ಅಮಂಡಾಗೆ ಇದು ಎರಡನೇ ಮದುವೆ. ಮೊದಲನೆ ಪತಿಯಿಂದ ಐವರು ಮಕ್ಕಳಿದ್ದಾರೆ. ಅದೆಲ್ಲ ಗೊತ್ತಿದ್ದರೂ ದೆವ್ವ ಅವಳಿಗೆ ಪ್ರಪೋಸ್ ಮಾಡಿದೆಯಂತೆ.