ಅಂತಿಮ ಸಂಸ್ಕಾರದ ವೇಳೆ ಸ್ಮಶಾನಕ್ಕೆ ಮಹಿಳೆಯರು ಹೋಗುವುದಿಲ್ಲ. ಹಿಂದೂ ಧರ್ಮದಲ್ಲಿ ಸ್ಮಶಾನಕ್ಕೆ ಮಹಿಳೆಯರು ಹೋಗೋದು ನಿಷಿದ್ಧ. ಇದಕ್ಕೆ ಅನೇಕ ಕಾರಣಗಳಿವೆ.
ಮನೆಯಲ್ಲಿ ಸಾವಾದ್ರೆ ಶವವನ್ನು ಮನೆಯಿಂದ ತೆಗೆದುಕೊಂಡು ಹೋದ ನಂತ್ರ ಮನೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ಮನೆ ಕ್ಲೀನ್ ಮಾಡಿದ ನಂತ್ರ ಅಡುಗೆ ಮಾಡಲಾಗುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗ್ಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ. ಈ ಎಲ್ಲ ಕೆಲಸ ಮಾಡಲು ಮಹಿಳೆಯರು ಮನೆಯಲ್ಲಿರುವುದು ಅವಶ್ಯಕ. ಆದ್ರೆ ಇದೊಂದೇ ಕಾರಣವಲ್ಲ.
ಸ್ಮಶಾನದಲ್ಲಿ ಆತ್ಮಗಳು ವಾಸವಾಗಿರುತ್ತವೆ. ಕೆಟ್ಟ ಆತ್ಮಗಳು ನೆಲೆ ನಿಲ್ಲಲು ಮನುಷ್ಯನ ಹುಡುಕಾಟ ನಡೆಸುತ್ತವೆ. ವರ್ಜಿನ್ ಹುಡುಗಿಯರನ್ನು ಆತ್ಮಗಳು ಹೆಚ್ಚಾಗಿ ಸೆಳೆಯುತ್ತವೆ ಎನ್ನುವ ಮಾತೂ ಇದೆ.
ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡವರು ಕೂದಲನ್ನು ಕಟ್ ಮಾಡಬೇಕು. ಈ ಪದ್ಧತಿಯಿಂದ ಮಹಿಳೆಯರನ್ನು ದೂರವಿಡಲು ಸ್ಮಶಾನಕ್ಕೆ ಹೋಗಲು ಅನುಮತಿ ನೀಡುವುದಿಲ್ಲ.
ಮಹಿಳೆಯರು ಮೃದು ಸ್ವಭಾವದವರು. ಸ್ಮಶಾನದಲ್ಲಿ ಅತ್ತರೆ ಆತ್ಮಕ್ಕೆ ಶಾಂತಿ ಸಿಗೋದಿಲ್ಲ ಎಂಬ ನಂಬಿಕೆ ಇದೆ. ಸಾವಿನ ನೋವಿನಲ್ಲಿರುವ ಮಹಿಳೆಯರು ಸ್ಮಶಾನದಲ್ಲಿಯೂ ಅತ್ತು ಆತ್ಮಕ್ಕೆ ಶಾಂತಿ ನೀಡುವುದಿಲ್ಲ ಎನ್ನುವ ಕಾರಣಕ್ಕೆ ಅವರನ್ನು ದೂರವಿಡಲಾಗುತ್ತದೆ.