ರಾಜಕೀಯ

ಮಹಿಳಾ ಸಚಿವರಿಂದ ಬಿಯರ್ ಬಾರ್ ಉದ್ಘಾಟನೆ ! ಸಿಎಂ ಯೋಗಿಗೆ ತೀವ್ರ ಮುಜುಗರ

By admin

May 30, 2017

ಉತ್ತರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ವಾತಿ ಸಿಂಗ್ ಅವರು ಬಿಯರ್ ಬಾರ್ವೊಂದನ್ನು ಉದ್ಘಾಟಿಸಿದ ಫೋಟೋಗಳು ದೇಶಾದ್ಯಂತ ವೈರಲ್ ಆಗಿದ್ದು, ನೂತನ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತೀವ್ರ ಮುಜುಗರ ತಂದಿಟ್ಟಿದೆ.

 

ಸ್ವಾತಿ ಸಿಂಗ್ ಅವರು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಗೌರವ್ ಪಾಂಡೆ ಮತ್ತು ಅವರ ಪತ್ನಿ ನೇಹಾ ಅವರೊಂದಿಗೆ  ಗೋಮತಿ ನಗರದಲ್ಲಿ  ಬಿ ದಿ ಬಿಯರ್ ಎಂಬ ಹೆಸರಿನ ಬಿಯರ್ ಬಾರ್ವೊಂದಕ್ಕೆ  ಚಾಲನೆ ನೀಡಿದ್ದರು.

ಈ ವಿಚಾರ ವೈರಲ್ ಆಗುತ್ತಿದ್ದಂತೆ ವಿಪಕ್ಷಗಳು ಮತ್ತು ಸಾರ್ವಜನಿಕರು ನೂತನ ಸರ್ಕಾರದ ವಿರುದ್ಧ ವ್ಯಾಪಕ ಟೀಕಾ ಪ್ರಹಾರ ನಡೆಸಿದ್ದು, ನೂತನ ಬಿಯರ್ ಬಾರ್ಗೆ ಸರಿಯಾದ ಪರವಾನಿಗೆ ಇಲ್ಲ. ಸರ್ಕಾರ ದ್ವಂದ ನಿಲುವುಗಳನ್ನು ತೋರಿ ಅಕ್ರಮಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಸಚಿವೆ ಸ್ವಾತಿ ಮತ್ತು ಇಬ್ಬರು ಅಧಿಕಾರಿಗಳ ಬಳಿ ಸಿಎಂ ಯೋಗಿ ಕೂಡಲೇ ವರದಿ ನೀಡುವಂತೆ ಹೇಳಿದ್ದಾರೆ.

ಸ್ವಾತಿ ಸಿಂಗ್ ಅವರು ಮಾಯಾವತಿ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಬಿಜೆಪಿ ನಾಯಕ ದಯಾ ಶಂಕರ್ ಸಿಂಗ್ ಅವರ ಪತ್ನಿಯಾಗಿದ್ದು, ಸರೋಜಿನಿ ನಗರ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿ  ಸಚಿವೆಯಾಗಿದ್ದಾರೆ.