ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ತಯಾರಿ ಆಂಧ್ರಪ್ರದೇಶದಲ್ಲಿ ಜೋರಾಗಿ ನಡೆಯುತ್ತಿದೆ.
ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಹತ್ವದ ಘೋಷಣೆ ಮಾಡಿದ್ದಾರೆ. ನಾಯ್ಡು ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ 10 ಸಾವಿರ ರೂಪಾಯಿ ಹಾಗೂ ಒಂದು ಮೊಬೈಲ್ ಫೋನ್ ನೀಡಲಿದ್ದಾರಂತೆ.
ಅಮರಾವತಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಾಯ್ಡು ಈ ಘೋಷಣೆ ಮಾಡಿದ್ದಾರೆ. ಹಣ ಮಹಿಳೆಯರಿಗೆ ಮೂರು ಹಂತದಲ್ಲಿ ಸಿಗಲಿದೆ. ಫೆಬ್ರವರಿಯಲ್ಲಿ ಮೊದಲ ಚೆಕ್ ವಿತರಣೆಯಾಗಲಿದೆ.ಮಹಿಳೆಯರಿಗೆ ಫೆಬ್ರವರಿಯಲ್ಲಿ 2500 ರೂಪಾಯಿ ಚೆಕ್ ಸಿಗಲಿದೆ. ಶೀಘ್ರವೇ ಸ್ಮಾರ್ಟ್ಫೋನ್ ನೀಡುವುದಾಗಿ ಅವರು ಹೇಳಿದ್ದಾರೆ.
ಮಹಿಳೆಯರ ಸ್ವಾಭಿಮಾನವನ್ನು ರಕ್ಷಿಸಲು ಬಯಸುತ್ತೇನೆ. ಒಬ್ಬ ಸಹೋದರನಂತೆ ನಾನು ಅವ್ರಿಗೆ ಸಹಾಯ ಮಾಡುತ್ತೇನೆ. ನಮ್ಮ ಬಳಿ ತುಂಬಾ ಹಣವಿಲ್ಲ. ಕೈಲಾದಷ್ಟು ಸಹಾಯವನ್ನು ಮಾಡುತ್ತೇನೆ ಎಂದಿದ್ದಾರೆ. ಮಹಿಳೆಯರು ಸರ್ಕಾರದ ಪ್ರಕಟಣೆಯನ್ನು ಸ್ವಾಗತಿಸಿದ್ದಾರೆ.
ಆಂಧ್ರದಲ್ಲಿ ಸುಮಾರು 93 ಲಕ್ಷ ಸ್ವ ಸಹಾಯ ಗುಂಪಿನ ಮಹಿಳೆಯರಿದ್ದಾರೆ. ಸರ್ಕಾರಕ್ಕೆ ಈ ಯೋಜನೆಯಡಿ ಒಟ್ಟೂ 9400 ಕೋಟಿ ಖರ್ಚಾಗುವ ಸಾಧ್ಯತೆಯಿದೆ.