ಉಪಯುಕ್ತ ಮಾಹಿತಿ

ಮಲಗುವ ರೀತಿ ನೋಡಿ ನಿಮ್ಮ ಗುಣಗಳನ್ನು ತಿಳಿಯಬಹುದು..!ಹೇಗೆ ಗೊತ್ತಾ..?

By admin

January 27, 2018

ನಿದ್ರಾಭಂಗಿಗಳೂ ನಮ್ಮ ಗುಣಗಳನ್ನು ಹೇಳಬಲ್ಲವು. ಇಂಗ್ಲೆಂಡಿನ ಸ್ಲೀಪ್ ಅಡ್ವೈಸರಿ ಸರ್ವಿಸ್, ಸರ್ವೆ ಮೂಲಕ ಒಟ್ಟಾರೆ 6 ಸಾಮಾನ್ಯ ನಿದ್ರಾಭಂಗಿಗಳನ್ನು ಗುರುತಿಸಿದೆ. ಅದರಂತೆ ಅವರವರ ವ್ಯಕ್ತಿತ್ವಗಳನ್ನೂ ಸ್ಟಡಿ ಮಾಡುತ್ತಾ ಹೋಗಿದೆ. ಒಬ್ಬ ವ್ಯಕ್ತಿ 55 ನಿಮಿಷಕ್ಕೂ ಅಧಿಕ ಕಾಲ ಒಂದೇ ಭಂಗಿಯಲ್ಲಿ ಮಲಗಿದರೆ, ಅದು ಅವರ ನಿದ್ರಾಭಂಗಿ ಎನಿಸಿಕೊಳ್ಳುತ್ತದೆ.

1.ಮಗುಚಿ ಮಲಗುವುದು:-

ದೇಹವನ್ನು ಕೆಳಮುಖವಾಗಿಸಿ ಮಲಗುವವರು ಶುದ್ಧ ಸೋಮಾರಿಗಳು, ರಸಿಕತನವುಳ್ಳವರು, ಮತ್ತೊಬ್ಬರಿಗೆ ಮೋಸ ಮಾಡುವವರೂ ಆಗಿರುತ್ತಾರೆ. ಇವರನ್ನು ಜಾಸ್ತಿ ನಂಬಬಾರದಂತೆ. ತೀರಾ ಸಿಟ್ಟು, ಅತಿಯಾದ ನಾಚಿಕೆ ಇವರ ಸ್ವಭಾವ. ಜನರೊಟ್ಟಿಗೆ ಇವರು ಬೆರೆಯುವುದಿಲ್ಲ.

2.ಶೂಟಿಂಗ್ ಭಂಗಿ:-

ಒಂದೇ ಮಗ್ಗಲಲ್ಲಿ, ಎರಡೂ ಕೈಗಳನ್ನು ಚಾಚಿಕೊಂಡು ಮಲಗುವವರು ತುಂಬಾ ಹಿಂಜರಿಕೆಯುಳ್ಳವರಾಗಿರುತ್ತಾರೆ. ಅವರನ್ನಷ್ಟೇ ನಂಬುತ್ತಾರೆ. ಇವರು ಪಕ್ಕಾ ವ್ಯವಹಾರ ವ್ಯಕ್ತಿತ್ವದವರು. ಇವರ ಜಿಪುಣತನದಿಂದ ಮತ್ತೊಬ್ಬರಿಗೆ ಕಿರಿಕಿರಿಯನ್ನು ಸೃಷ್ಟಿಸುತ್ತದಂತೆ.

 

3.ಮುದುಡಿದ ಭಂಗಿ:-

ಇದು ಸಾಮಾನ್ಯ ಭಂಗಿ. ದೇಹವನ್ನು ಬಿಲ್ಲಿನಂತೆ ಬಾಗಿಸಿ, ನೂಲಿನಂತೆ ಮುದುಡಿ ಮಲಗಿರುತ್ತಾರೆ. ಇವರದ್ದು ತುಂಬಾ ಗಡಸು ಮಾತು. ಆದರೆ, ಒಳಗೆ ಇವರು ಮೃದುವಾಗಿರುತ್ತಾರೆ. ಸೂಕ್ಷ್ಮ ಸ್ವಭಾವದ ಇವರಿಗೆ ಒಂದು ಹೇಳಿದ್ರೆ ಕಮ್ಮಿ, ಎರಡು ಹೇಳಿದ್ರೆ ಹೆಚ್ಚು.

4.ಸೈನಿಕ ಭಂಗಿ:-

ಎರಡೂ ಕೈಗಳನ್ನು ಚಾಚಿಕೊಂಡು, ದೇಹವನ್ನು ನೆಟ್ಟಗೆ ಮಾಡಿಕೊಂಡು ಮಲಗಿಕೊಳ್ಳುವವರು ಶಿಸ್ತುಪಾಲನೆಗೆ ಹೆಚ್ಚು ಆದ್ಯತೆ ಕೊಡುತ್ತಾರೆ. ರಸಿಕತನ ಎನ್ನುವುದೇ ಇವರಿಗೆ ಗೊತ್ತಿರುವುದಿಲ್ಲ. ತಮ್ಮಂತೆಯೇ ಎಲ್ಲರೂ ಇರಬೇಕೆನ್ನುವು ಇವರ ಸ್ವಭಾವವನ್ನು ಬಹುತೇಕರು ಒಪ್ಪುವುದಿಲ್ಲ.

5.ಒಂದೇ ಪಾರ್ಶ್ವ:-

ತೋಳಿನ ಮೇಲೆ ತಲೆಯಿಟ್ಟುಕೊಂಡು, ದೇಹದ ಒಂದೇ ಮಗ್ಗಲಿನಲ್ಲಿ ಮಲಗುವವರು ಮುಕ್ತ ಸ್ವಭಾವದವರು. ಬೇಗನೆ ಇನ್ನೊಬ್ಬರನ್ನು ನಂಬುತ್ತಾರೆ. ಹೆಚ್ಚು ಮಾತಾಡುವ ಸ್ವಭಾವ ಇವರದ್ದು. ಯಾವ ಕೆಲ್ಸ ಮಾಡೋದಾದ್ರೂ ತೀರಾ ಪರ್ಫೆಕ್ಟ್ ಆಗಿರಲು ಬಯಸುತ್ತಾರೆ.

6.ಸ್ಟಾರ್‌ಫಿಶ್ ಭಂಗಿ:-

ಎರಡೂ ಕೈಯನ್ನು ಮೇಲಕ್ಕೆತ್ತಿಕೊಂಡು, ಕಾಲುಗಳನ್ನೂ ಅಗಲ ಮಾಡಿಕೊಂಡು ವಿರಾಜಮಾನರಾಗಿ ನಿದ್ರಿಸುವವರು ತುಂಬಾ ಮಹತ್ವಾಕಾಂಕ್ಷಿಗಳು. ಕ್ರಿಯಾಶೀಲ ಬುದ್ಧಿವಂತಿಕೆ ಇವರಲ್ಲಿರುತ್ತದೆ. ಯಾರ ಮಾತನ್ನೂ ಕೇಳುವವರಲ್ಲ. ಆದರೆ, ಎಲ್ಲರನ್ನೂ ಪ್ರೀತಿಸುವವರಾಗಿರುತ್ತಾರೆ.