ಕೈ ತೋಟದಲ್ಲಿ ಬೆಳೆಯುವ ಘಮ ಘಮ ವೆನ್ನುವ “ಪುದೀನ ಸೊಪ್ಪು” ಅಡಿಗೆ ಮನೇಲಿ ಮಾತ್ರ ಸೀಮಿತ ಆಗದೇ ಆರೋಗ್ಯಕ್ಕೂ ತುಂಬಾ ಒಳ್ಳೇದು. ಏಷ್ಯಾದಲ್ಲಿ ಬೆಳೆದು ಪ್ರಪಂಚದಾದ್ಯಂತ ಬಳಾಕೆಯಾಗುತ್ತಾ ಇರೋ ಈ ಸೊಪ್ಪಲ್ಲಿ ಪ್ರೋಟೀನ್, ಐರನ್, ಕ್ಯಾಲ್ಷಿಯಂ, ಪೊಟ್ಯಾಷಿಯಂ, ಫಾಸ್ಫರಸ್,ಮಗ್ನೀಷಿಯಂ ಅಲ್ಲದೇ ವಿಟಮಿನ್ A ಹಾಗು C ಇರೋದ್ರೀಂದ ಆರೋಗ್ಯಕ್ಕೆ ಬಹಳ ಒಳ್ಳೇದು.
ಪುದಿನ ಮಾರಕ ಕಾಯಿಲೆಯಾದ ಕ್ಯಾನ್ಸರ್ ಸೇರಿದಂತೆ ತುಂಬಾ ಕಾಯಿಲೆಗಳಿಗೆ ಒಳ್ಳೆಯದು:-
ಆಹಾರ ಜೀರ್ಣ ಆಗೋಕೆ, ವಾಂತಿ ತಡಿಯಕ್ಕೆ, ಕ್ಯಾನ್ಸರ್ ಬರದೇ ಇರೋ ಹಾಗೆ ಕಾಪಾಡೋಕೆ, ಅಸ್ತಮಾ, ನೆಗಡಿ, ತಲೆನೋವು, ಕೆಮ್ಮು ಮತ್ತೆ ಬೇಧಿ ಇದೆಲ್ಲಕ್ಕೂ ರಾಮ ಬಾಣ. ಕಟ್ಟಿದ ಮೂಗಿಗೆ, ಗಂಟಲು ಅಥವಾ ಶ್ವಾಸಾಕೋಶದ ತೊಂದರೆಗೆ ಮತ್ತು ಅಲರ್ಜಿ ಆಗದ ಹಾಗೆ ನೋಡಿಕೊಳ್ಳುತ್ತೆ. ಇನ್ನು ಗರ್ಭಿಣಿಯರಲ್ಲಿ ಬೆಳಗಿನ ಹೊತ್ತು ವಾಂತಿ ಆಗದ ಹಾಗೆ ನೋಡಿಕೊಳ್ಳುತ್ತೆ. ಅಲ್ಸರ್ ನಿವಾರಿಸಿ ಲಿವರ್ ನ ಆರೋಗ್ಯ ಕಾಪಾಡುತ್ತೆ.
ನಮ್ಮ ಚರ್ಮದ ಮೇಲೆ ಪುದಿನ ಮೋಡಿ :-
ಚರ್ಮದ ಮೇಲೆ ಹಚ್ಚೋಕೆ ಹಸಿದು, ಒಣಗಿದ್ದು, ರುಬ್ಬಿದ್ದು ಅಥವಾ ಎಣ್ಣೆ ರೂಪದಲ್ಲಿ ಬಳಸಿ ಚರ್ಮದ ಕಾಂತಿ ಹೆಚ್ಚಿಸ ಬಹುದು. ಚರ್ಮದ ಸುಕ್ಕು, ಕಪ್ಪು ಕಲೆ, ಕಣ್ಣಿನ ಸುತ್ತ ಕಪ್ಪು ಬಣ್ಣ , ಮೊಡವೆ ಎಲ್ಲಕ್ಕೂ ಬಳಸಬಹುದು. ಹಾಗಾಗೀನೆ ಕ್ಲೆನ್ಸಿಂಗ್ ಲೋಷನ್ಗಳಲ್ಲಿ ಇದನ್ನ ಬಳಸ್ತಾರೆ. ಇದರಿಂದ ಹಲ್ಲುಜ್ಜಿದರೆ ಹಲ್ಲು ಬಿಳಿಯೂ ಆಗುತ್ತೆ, ಬಾಯ್ವಾಸನೆನೂ ದೂರ ಆಗುತ್ತೆ. ಹಲ್ಲು ಹಾಳಾಗದ ಹಾಗೆ ನೋಡಿಕೊಂಡು, ನಾಲಿಗೇನ ಸ್ವಚ್ಚಗೊಳಿಸುತ್ತೆ. ಬಾಯಲ್ಲಿ ಬ್ಯಾಕ್ಟೀರಿಯಾ ಬೆಳೆಯದ ಹಾಗೆ ನೋಡಿಕೊಳ್ಳುತ್ತೆ. ಅದಕ್ಕೇ ಟೂತ್ ಪೇಸ್ಟ್, ಚ್ಯುಯಿಂಗ್ ಗಮ್ ಗಳಲ್ಲಿ ಇದನ್ನ ಬಳಸ್ತಾರೆ.
ಅಡಿಗೆ ಉಪಯೋಗದಲ್ಲಿ :-
ಇದರಲ್ಲಿ ಪುದೀನ ಚಟ್ನಿ, ಪುದೀನ ಮೊಸರು ಬಜ್ಜಿ, ಪುದೀನ ರೈಸ್, ಜಲ್ ಜೀರಾ, ಪುದೀನ ಮಜ್ಜಿಗೆ ಮತ್ತಿನ್ನೂ ಏನೇನೋ ರುಚಿರುಚಿಯಾಗಿ ಮಾಡ್ಕೊಂಡು ತಿನ್ಬೋದು.
ನಮಗೆ ಗೊತ್ತಿಲ್ಲದ ಇನ್ನೂ ಕೆಲುವು ಉಪಯೋಗಗಳು ಎಲ್ಲಿವೆ ನೋಡಿ !
*ಶೀತ ಆಗಿ ಗಂಟಲು ನೋವು ಬಂದಿದ್ದರೆ , ಅದಕ್ಕೆ ಪುದೀನ ರಸದ ಜೊತೆ ಉಪ್ಪು ಬೆರೆಸಿ ಗಾರ್ಗಲ್ ಮಾಡಿ.
*ದಿನಕ್ಕೆ ಎರಡರಿಂದ ಮೂರು ಸರ್ತಿ ಪುದೀನ ಟೀ ಕುಡಿದರೆ ಅಜೀರ್ಣ ಮತ್ತು ಶೀತ ಕಡಿಮೆ ಆಗುತ್ತೆ.
*ಪುದೀನ ಜ್ಯೂಸ್ ಜೊತೆ ಅಷ್ಟೇ ಪ್ರಮಾಣ ಜೇನು ಹಾಕಿ ಕುಡಿಯೋದ್ರಿಂದ ಅಸಿಡಿಟಿ ಹಾಗು ವಾಂತಿ ಗುಣ ಆಗುತ್ತೆ.
*ಊಟಕ್ಕೆ ಮುಂಚೆ ಮತ್ತು ಊಟ ಆದ್ಮೇಲೆ ಪುದೀನ ಎಲೆ ತಿನ್ನೋದ್ರಿಂದ ಬಾಯಿ ವಾಸನೆ ಬರಲ್ಲ.
*ಪುದೀನ ಪೇಸ್ಟ್ ಗೆ ಅರಿಶಿಣ ಹಾಕಿ ಮುಖಕ್ಕೆ ಹಚ್ಚೋದ್ರಿಂದ ಮೊಡವೆ ಕಡಿಮೆ ಆಗುತ್ತೆ.
*ಪುದೀನ ಜ್ಯೂಸ್ ಗೆ ಅರ್ಧ ಚಮಚ ಶುಂಠಿ , ಸ್ವಲ್ಪ ನಿಂಬೆರಸ ಮತ್ತು ಜೇನು ಸೇರಿಸಿ 3 ದಿನ ಕುಡಿದರೆ , ವಾಂತಿ ಪೂರ್ತಿ ವಾಸಿ ಆಗುತ್ತೆ.
ನೋಡಿದರಲ್ಲ ಮನೆ ಮುಂದೆ ಸಿಗೋ ಪುದೀನಾ ಸೊಪ್ಪಿಂದ ಎಷ್ಟೆಲ್ಲಾ ಉಪಯೋಗ ಇದೆ ಅಂತಾ? ನೀವಿದನ್ನ ಹೆಂಗೆ ಉಪಯೋಗಿಸ್ತೀರ ಅಂತ ಯೋಚ್ನೆ ಮಾಡಿ.