ವಾಸ್ತು ಪ್ರಕಾರ ಮನೆ ಕಟ್ಟಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.. ಆದರೆ ಯಾವುದೋ ಕಾರಣದಿಂದ ಸಾಧ್ಯವಾಗಿರುವುದಿಲ್ಲ.. ಅಷ್ಟು ತಲೆ ಕೆಡಿಸಿಕೊಳ್ಳುವ ಅವಷ್ಯಕತೆ ಇಲ್ಲ.. ಇಲ್ಲಿ ನೋಡಿ ನಿಮಗಾಗಿ ಸಿಂಪಲ್ ವಾಸ್ತು.
ಮನೆಯು ಯಾವ ದಿಕ್ಕಿಗೆ ಮುಖಮಾಡಿದೆಯೋ ಅದೇ ದಿಕ್ಕಿಗೆ ಮುಖ್ಯದ್ವಾರ ನಿರ್ಮಿಸುವುದು ಒಳ್ಳೆಯದು.ಬಾಗಿಲಿನ ಮುಂಭಾಗದಲ್ಲಿ ಜಗಲಿ ಇದ್ದರೆ ಅತ್ಯುತ್ತಮ.ದಕ್ಷಿಣಾಭಿಮುಖವಾಗಿರುವ ಮನೆಗೆ ಮಾತ್ರ ಮುಖ್ಯದ್ವಾರವು ದಕ್ಷಿಣ ಭಾಗಕ್ಕಿರಬಾರದು.ಪೂರ್ವ ಅಥವಾ ಪಶ್ಚಿಮ ಭಾಗಕ್ಕೆ ಅಭಿಮುಖವಾಗಿ ಮುಖ್ಯದ್ವಾರ ನಿರ್ಮಿಸಬಹುದು.
ಮನೆ ಕಟ್ಟುವಾಗ ಯಾವ ಯಾವ ಮೂಲೆಯಲ್ಲಿ ಯಾವ ಯಾವ ಕೋಣೆ ಇಡಬೇಕೆಂದು ಅರಿತರೆ ಸಾಕು.. ಅದಕ್ಕಿಂತ ಇನ್ನೇನು ಬೇಕಿಲ್ಲ.. ಸಾವಿರಾರು ರೂಪಾಯಿ ಖರ್ಚು ಮಾಡಬೇಕಿಲ್ಲ.. ನಿಮಗಾಗಿ ಯಾವ ದಿಕ್ಕಿನಲ್ಲಿ ಏನಿರಬೇಕೆಂದು ಮಾಹಿತಿ ಇಲ್ಲಿದೆ ನೋಡಿ.. ಶೇರ್ ಮಾಡಿ ಸ್ನೇಹಿತರಿಗೂ ಉಪಯೋಗವಾಗಬಹುದು..
ಮೊದಲನೆಯದಾಗಿ ಮನೆಯ ಬಾಗಿಲು :-
ಮನೆಯ ಮುಖ್ಯ ದ್ವಾರ ಯಾವಾಗಲೂ ಪೂರ್ವ ದಿಕ್ಕು ಅಥವ ಉತ್ತರ ದಿಕ್ಕಿನಲ್ಲಿ ಇರಬೇಕು. ಮನೆಯ ಮುಂಬಾಗಿಲಿನಲ್ಲಿ ಸದಾ ಗಾಳಿ, ಬೆಳಕು ಬರುವಂತಿರಬೇಕು.
ಮಾಸ್ಟರ್ ಬೆಡ್ ರೂಮ್:-
ಮಾಸ್ಟರ್ ಬೆಡ್ ರೂಮ್ ಯಾವಾಗಲೂ ಕುಬೇರನ (ನೈರುತ್ಯ) ದಿಕ್ಕಿನಲ್ಲಿರಬೇಕು ಅಂದರೆ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಮಧ್ಯ ಬರುವ ಮೂಲೆ .
ನೀರಿನ ಸಂಪ್:- ನೀರಿನ ಸಂಪ್ ಯಾವಗಲೂ ಈಶಾನ್ಯ ದಿಕ್ಕಿನಲ್ಲಿರಬೇಕು.ಅಂದರೆ ಪೂರ್ವ ಮತ್ತು ಉತ್ತರ ದಿಕ್ಕಿನ ಮಧ್ಯ ಬರುವ ಮೂಲೆ.
ದೇವರ ಮನೆ:- ದೇವರ ಮನೆಯ ಬಾಗಿಲು ಪೂರ್ವಕ್ಕೆ ಅಥವಾ ಉತ್ತರಕ್ಕೆ ಇರಬೇಕು.
ಅಡುಗೆ ಮನೆ.. ಅಡುಗೆ ಮನೆ ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಅಂದರೆ ಪೂರ್ವ ಮತ್ತು ದಕ್ಷಿಣ ದಿಕ್ಕಿನ ಮಧ್ಯ ಬರುವ ಮೂಲೆ ಯಲ್ಲಿ ಇರಬೇಕು.
ನೀರಿನ ಟ್ಯಾಂಕ್:- ಟ್ಯಾಂಕ್ ಯಾವಾಗಲೂ ಮನೆಯ ಮೇಲಿನ ನೈರುತ್ಯ ದಿಕ್ಕು ಅಂದರೆ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಬರುವ ಮೂಲೆಯಲ್ಲಿ ಇಡಬೇಕು.
ಬಾತ್ ರೂಮ್ :-
ಬಾತ್ ರೂಮ್ ಯಾವಗಲೂ ವಾಯುವ್ಯ ದಿಕ್ಕು ಅಂದರೆ ಪಶ್ಚಿಮ ಮತ್ತು ಉತ್ತರ ದಿಕ್ಕಿನ ಮಧ್ಯ ಬರುವ ಮೂಲೆಯಲ್ಲಿರಬೇಕು.