ಸಾಮಾನ್ಯವಾಗಿ ಹಿಂದೆ ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ಧತೆಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತಿತ್ತು. ವಾಸ್ತವವಾಗಿ ಹರಳೆಣ್ಣೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ.
ಹಳ್ಳಿಗಾಡಿನ ಪ್ರತಿಯೊಂದು ಮನೆಗಳಲ್ಲಿರುವ ಈ ಹರಳೆಣ್ಣೆಯ ಅದ್ಬುತ ಪ್ರಯೋಜನಗಳನ್ನು ತಿಳಿಯಿರಿ…
- ಜೇನ್ನೊಣ ಕಚ್ಚಿದ ಬಳಿಕ ಆಗುವ ಉರಿಯನ್ನು ಕಡಿಮೆ ಮಾಡಲು ಹರಳೆಣ್ಣೆ ಹಚ್ಚಿದರೆ ಸಾಕು.
- ಧ್ವನಿ ಗಡುಸಾಗಿದ್ದರೆ ಗಂಟಲಿಗೆ ಪ್ರತಿದಿನ ಮೂರು ತಿಂಗಳುಗಳ ಕಾಲ ಹರಳೆಣ್ಣೆ ಸವರಿಕೊಳ್ಳಿ, ಬಿದ್ದು ಹೋದ ಧ್ವನಿ ಇಲ್ಲವಾಗುತ್ತದೆ.
- ವಾರಕ್ಕೊಮ್ಮೆ ಹರಳೆಣ್ಣೆಯಿಂದ ಕೆಳಬೆನ್ನನ್ನು ಮಸಾಜ್ ಮಾಡುತ್ತಾ ಬಂದರೆ ಸೊಂಟನೋವು ಕಡಿಮೆಯಾಗುತ್ತದೆ.
- ಹೊಟ್ಟೆ ಗುಡುಗುಡು ಸದ್ದು ಬಂದರೆ ಕೊಂಚ ಹರಳೆಣ್ಣೆಯನ್ನು ಆಹಾರದ ಮೂಲಕ ಸೇವಿಸಿ.
- ಗೊರಕೆಯ ತೊಂದರೆ ಇದ್ದರೆ ಕೆಳಹೊಟ್ಟೆಗೆ ಎರಡು ವಾರಗಳ ಕಾಲ ಹರಳೆಣ್ಣೆಯಿಂದ ಮಸಾಜ್ ಮಾಡಿ.
- ಮದ್ಯಪಾನದಿಂದ ಮುಕ್ತಿ ಪಡೆಯಲು ಆಹಾರದಲ್ಲಿ ಕೊಂಚ ಹರಳೆಣ್ಣೆ ಸೇರಿಸುತ್ತಿದ್ದರೆ ಉತ್ತಮ.
- ಹರಳೆಣ್ಣೆಯಿಂದ ಆಗಾಗ ಮಸಾಜ್ ಮಾಡಿ, ವೃದ್ದಾಪವನ್ನು ದೂರಗೊಳಿಸಬಹುದು.
- ಕಿವಿ ಮೊರೆತ ತೊಂದರೆ ಇದ್ದರೆ ಒಂದು ತಿಂಗಳ ಕಾಲ, ಪ್ರತಿದಿನ ನಿಮ್ಮ ಊಟದಲ್ಲಿ ಆರರಿಂದ ಎಂಟು ಹನಿ ಹರಳೆಣ್ಣೆ ಸೇರಿಸಿ ಸೇವಿಸಿದರೆ ಕಡಿಮೆಯಾಗುತ್ತದೆ. ಮದ್ಯಪಾನದಿಂದ ಮುಕ್ತಿ ಪಡೆಯಲು ಆಹಾರದಲ್ಲಿ ಕೊಂಚ ಹರಳೆಣ್ಣೆ ಸೇರಿಸುತ್ತಿದ್ದರೆ ಉತ್ತಮ.
- ಕೂದಲ ಬೆಳವಣಿಗೆಗೆ ಶಾಂಪೂ ಬಳಸುವ ಮೊದಲು ಕೂದಲಿಗೆ ಹರಳೆಣ್ಣೆ ಹಚ್ಚಿ ಈಪಾಟ್ಟು ನಿಮಿಷಗಳ ಬಳಿಕ ಶಾಂಪೂ ಹಾಕಿ ತೊಳೆಯಿರಿ.